ವಿಜಯ್ ಮಲ್ಯಗೆ ತಪ್ಪದ ಸಂಕಷ್ಟ: ಆಸ್ತಿ ಹರಾಜಿಗೆ ಮೂಹೂರ್ತ ಫಿಕ್ಸ್ ಮಾಡಿದ ಸಾಲ ಕೊಟ್ಟವರು

ಬೆಂಗಳೂರು: ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯಗೆ ಮತ್ತೇ ಸಂಕಷ್ಟ ಎದುರಾಗಿದೆ. ಮಲ್ಯ ಅವರಿಗೆ ಸಾಲಕೊಟ್ಟ 17ಕ್ಕೂ ಅಧಿಕ ಸಂಸ್ಥೆಗಳೀಗ ಮಲ್ಯ ಅವರ ಆಸ್ತಿ ಹಾರಾಜು ಹಾಕಲು ಮುಂದಾಗಿದ್ದು, ಹರಾಜಿಗೆ ದಿನಾಂಕ ನಿಗದಿಪಡಿಸಿಕೊಂಡಿವೆ. ಮಲ್ಯ ಸುಮಾರು 8 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲದ ಮಾಡಿಕೊಂಡಿದ್ದಾರೆ. ಏರಲೈನ್ಸ್‍ಗೆ ಸಂಬಂಧಿಸಿದ ಆಸ್ತಿ ಮತ್ತು ವಾಹನಗಳ ಹರಾಜಿಗೆ ಡಿ. 7ರಿಂದ ಬಿಡ್ ಶುರವಾಗಲಿದೆ. ಕಿಂಗ್‍ಫಿಷರ್‍ಗಾಗಿ ಎಸ್‍ಬಿಐ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್‍ಗಳಲ್ಲಿ 7 ಸಾವಿರ ಕೋಟಿ ಸಾಲ ಪಡೆದಿದ್ದಾರೆ.
ಮುಂಬೈ ಏರ್ಪೋರ್ಟ್ನಲ್ಲಿರುವ 17 ಸಾವಿರ ಚದರ ಅಡಿಯ ಕಿಂಗ್ಫಿಷರ್ ಹೌಸ್ ಕಟ್ಟಡವನ್ನು ಈಗಾಗಲೇ ಬ್ಯಾಂಕ್ಗಳು ವಶಕ್ಕೆ ಪಡೆದಿವೆ. ಆದರೆ, ಇನ್ನೂ ಮಾರಾಟ ಮಾಡಲಾಗಿಲ್ಲ. ಇದರ ಮೌಲ್ಯ 150 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಗೋವಾದಲ್ಲಿರುವ 90 ಕೋಟಿ ರೂಪಾಯಿ ಮೌಲ್ಯದ ವಿಲ್ಲಾ ಕೂಡಾ ಬ್ಯಾಂಕ್ ಪಾಲಾಗಿದೆ. ಏರ್ಲೈನ್ಸ್ಗೆ ಸೇರಿದ ಟೆಂಪೊ, ಟ್ರ್ಯಾಕ್ಟರ್, ಕಾರುಗಳು, ಎಸ್ಯುವಿ, ಏರ್ಕ್ರಾಫ್ಟ್ ಪುಲ್ಲರ್ಸ್, ಲಗೇಜ್ ಟ್ರಾಲಿ ಮತ್ತಿತರ ಚರ ಆಸ್ತಿಗಳನ್ನು ಡಿ.7ರಂದು ಇ ಹರಾಜು ಹಾಕಲು ನಿರ್ಧರಿಸಲಾಗಿದೆ. ಹರಾಜಿನ ಆರಂಭಿಕ ಮೊತ್ತವನ್ನು ಕನಿಷ್ಠ 65 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಮಲ್ಯಗೆ ನೀಡಲಾಗಿರುವ ಸಾಲದ ಮೊತ್ತದಲ್ಲಿ 1,100 ಕೋಟಿ ರೂ. ಮಾತ್ರ ಬ್ಯಾಂಕ್ ಗಳು ರಿಕೆವರಿ ಮಾಡಿಕೊಂಡಿವೆ. ಸಾಲದ ಮೇಲಿನ ಚಕ್ರ ಬಡ್ಡಿ 15.5 ರಷ್ಟಿದ್ದು, ಮಲ್ಯ ಅವರು ಪದೇ ಪದೇ ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದಾರೆ.