ಹಿಸಾಚಾರದಿಂದ ನಲುಗಿದ ಸುಡಾನ್‌ನಲ್ಲಿ: ಘರ್ಷಣೆಯಲ್ಲಿ 10 ಮಂದಿ ಸಾವು
ಗ್ರೇಟರ್ ಪಿಬೋರ್ : ದಕ್ಷಿಣ ಸುಡಾನ್ ಮತ್ತೊಮ್ಮೆ ಹಿಂಸಾಚಾರದಿಂದ ನಾಳಿಗಿದೆ. ಸೇನೆ ಮತ್ತು ನಾಗರಿಕರ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದರಿಂದ 10 ಮಂದಿ ಬಲಿಯಾಗಿದ್ದಾರೆ. ಈ ಪ್ರದೇಶದಲ್ಲಿ ಜಾನುವಾರು ಕಳ್ಳತನ, ಪ್ರತೀಕಾರದ ಹತ್ಯೆಗಳು ಮತ್ತು ಮಹಿಳೆಯರು ಮತ್ತು ಮಕ್ಕಳ ಅಪಹರಣ ಸಹಿತ ಹಲವು ಕಾರಣಗಳಿಂದ ಆಗಾಗ್ಗೆ ಹಿಂಸಾಚಾರ ಭುಗಿಲೇಳುತ್ತಲೇ ಇರುತ್ತವೆ. ಇದೀಗ ನಡೆದಿರುವ ಘರ್ಷಣೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರೇಟರ್ ಪಿಬೋರ್ ಆಡಳಿತ ಪ್ರದೇಶ (GPAA) ದಲ್ಲಿ ಭಾನುವಾರ ಕ್ಷುಲ್ಲಕ ಕಾರಣದಿಂದ ಪ್ರಾರಂಭವಾದ ಘರ್ಷಣೆ ಮೂರು-ನಾಲ್ಕು ದಿನ ಮುಂದುವರಿದಿದ್ದು ಪರಿಸ್ಥಿತಿ ನಿಯಂತ್ರಿಸಲು ಸೇನೆ ಕಾರ್ಯಾಚರಣೆಗಿಳಿದಿದೆ. ಆರೋಪಿಗಳನ್ನು ಸೇನೆ ಬಂಧಿಸಲು ಮುಂದಾದಾಗ ಈ ಘರ್ಷಣೆ ಭುಗಿಲೆದ್ದಿದೆ ಎಂದು ದಕ್ಷಿಣ ಸುಡಾನ್ ಸೇನೆಯ ವಕ್ತಾರರಾದ ಲುಲ್ ರುವಾಯ್ ಕೊಯಾಂಗ್ ತಿಳಿಸಿದ್ದಾರೆ.
ಘರ್ಷಣೆಗಳು ಭಾನುವಾರ ಸಂಜೆಯಿಂದ ತೆರೆದುಕೊಂಡವು ಮತ್ತು ಸೋಮವಾರದವರೆಗೂ ಮುಂದುವರೆಯಿತು, ಸೈನಿಕರು ತಪ್ಪಿಸಿಕೊಂಡ ತಮ್ಮ ಸಹೋದ್ಯೋಗಿಯನ್ನು ಪುನಃ ಬಂಧಿಸಲು ಕಳುಹಿಸಲಾಯಿತು. ಮಾಜಿ ಕಮಾಂಡರ್ ಅನ್ನು ಬೆಂಬಲಿಸಿದ ಶಸ್ತ್ರಸಜ್ಜಿತ ಅನ್ಯುಕ್ ಯುವಕರಿಂದ ಅವರು ಪ್ರತಿರೋಧವನ್ನು ಎದುರಿಸಿದರು. ದುರಂತವೆಂದರೆ, ಘರ್ಷಣೆಯ ಸಮಯದಲ್ಲಿ ಮಾಜಿ ಕಮಾಂಡರ್ ತನ್ನ ಪ್ರಾಣವನ್ನು ಕಳೆದುಕೊಂಡರು, ಸೋಮವಾರ ಸೈನ್ಯದ ಸ್ಥಾನದ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದ ಶಸ್ತ್ರಸಜ್ಜಿತ ಯುವಕರ ಕೋಪವನ್ನು ಮತ್ತಷ್ಟು ಹೆಚ್ಚಿಸಿತು. ಆದಾಗ್ಯೂ, ಸೇನೆಯು ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಇಥಿಯೋಪಿಯಾದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಗ್ರೇಟರ್ ಪಿಬೋರ್ ಆಡಳಿತ ಪ್ರದೇಶ (GPAA) ಈ ಪ್ರದೇಶವು ಬಹುಕಾಲದಿಂದ ಗುಂಪು ಘರ್ಷಣೆಗೆ ಒಳಗಾಗುತ್ತಿದೆ. ಗ್ರಾಮೀಣ ಮುರ್ಲೆ ಬುಡಕಟ್ಟು ಮತ್ತು ನೆರೆಯ ಜೊಂಗ್ಲೈ ರಾಜ್ಯದ ಡಿಂಕಾ ಮತ್ತು ನುಯರ್ ಬುಡಕಟ್ಟುಗಳ ನಡುವೆ ಈ ಕಲಹಗಳು ಮರುಕಳಿಸುತ್ತಲೇ ಇದ್ದು,ಈ ದ್ವೇಷದ ಕಲಹ ಅನೇಕ ಜೀವಗಳನ್ನು ಬಲಿತೆಗೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಸೇನೆ ತೀವ್ರ ನಿಗಾ ವಹಿಸಿದೆ. ಆದರೂ ಗಲಭೆಗಳು ನಡೆಯುತ್ತಲೇ ಇರುವುದು ಸರ್ಕಾರಕ್ಕೋ ಸವಾಲೆಂಬಂತಿದೆ.