ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬರೋಬ್ಬರಿ 1150 ಮನೆಗಳು.. ಬಸವ, ಅಂಬೇಡ್ಕರ್ ಯೋಜನೆಯಡಿ ‘ವಸತಿ’ ಮಂಜೂರು

0

ಬೆಂಗಳೂರು: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ, 38 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2022-23 ನೆ ಸಾಲಿನ ಮನೆಗಳ ಗುರಿಯಡಿಯಲ್ಲಿ, ಬಸವ ವಸತಿ ಹಾಗೂ Dr ಬಿ ಆರ್ ಅಂಬೇಡ್ಕರ್ ನಿವಾಸ (ಗ್ರಾಮೀಣ), ವಸತಿ ಯೋಜನೆ, ಅನ್ವಯ 1150 ಮನೆಗಳನ್ನು ಮಂಜೂರು ಮಾಡಿ ಇಂದು ಆದೇಶ ಹೊರಡಿಸಲಾಗಿದೆ.

ಬಡವರು, ದಲಿತರು ಹಾಗೂ ಅಸಹಾಯಕ ಕುಟುಂಬಗಳ ಬಹಳ ವರ್ಷಗಳ, ವಸತಿ ಹೊಂದುವ, ಕನಸಿಗೆ, ಸರಕಾರ ಸ್ಪಂದಿಸಿದ್ದು, ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಕೃತಜ್ಞತೆ ಸಲ್ಲಿಸಿದ್ದಾರೆ.

ಮತ ಕ್ಷೇತ್ರದ 38 ಪಂಚಾಯಿತಿಗಳ ವ್ಯಾಪ್ತಿಯಲ್ಲಿ, ಫಲಾನುಭವಿಗಳನ್ನು ಗುರುತಿಸಿ ವಸತಿ ಯೋಜನೆಯ ಪ್ರಯೋಜನ ದೊರಕಿಸಿ ಕೊಡಲಾಗುವುದು. ವಿವಿಧ ವಸತಿ ಯೋಜನೆಗಳಡಿ, ಪಂಚಾಯಿತಿಗಳ ಜನಸಂಖ್ಯೆ ಆಧಾರದ ಮೇಲೆ, ಮನೆಗಳನ್ನು ಎ ಬಿ ಸಿ ವರ್ಗಗಳ ಅನುಸಾರ ಪ್ರತಿ ಪಂಚಾಯಿತಿ ಗಳಿಗೆ, ಮನೆಗಳನ್ನು ಹಂಚಿಕೆ ಮಾಡಲಾಗಿದೆ, ಎಂದು ವಸತಿ ಇಲಾಖೆಯ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

You may have missed