ದೇವಾಲಯಗಳ ಅರ್ಚಕರು, ಸಿಬ್ಬಂದಿ ನಿರಾಳ.. ಇನ್ನು ಮುಂದೆ ಸರ್ಕಾರದಿಂದಲೇ ವೇತನ

0
Temple - Ramalinga Reddy

ಸಾಂಧರ್ಭಿಕ ಚಿತ್ರ

ಬೆಂಗಳೂರು: ಭಕ್ತಿಯ ಆಸರೆಯಾಗಿರುವ ದೇವಾಲಯಗಳಲ್ಲಿ ಇದೀಗ ಎಂದಿಲ್ಲದ ಸಡಗರ. ದೇಗುಲಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ರಾಜ್ಯ ಸರ್ಕಾರ ನೀಡಿರುವ ಕೊಡುಗೆಯಿಂದಾಗಿ ಮುಜರಾಯಿ ಕ್ಷೇತ್ರದಲ್ಲಿ ದುಡಿಯುವ ಮಂದಿಯಲ್ಲಿ ಸಂತಸ ಆವರಿಸಿದೆ.

ಮುಜರಾಯಿ ಇಲಾಖೆಯಿಂದ ಮತ್ತೊಂದು ಐತಿಹಾಸಿಕ ಆದೇಶ ವಾಗಿದ್ದು, ಎ ಮತ್ತು ಬಿ ವರ್ಗಗಳ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರಿಗೆ ಸರ್ಕಾರದಿಂದಲೇ ವೇತನ‌ ಪಾವತಿಗೆ ಕರಮವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ಇತಿಹಾಸದಲ್ಲೇ ಎ ಮತ್ತು ಬಿ ವರ್ಗಗಳ ದೇವಾಲಯಗಳಲ್ಲಿ ಪ್ರತಿ ತಿಂಗಳು ರೂ 2 ಕೋಟಿಯಿಂದ 3 ಕೋಟಿಯವರಿಗೂ ಉಳಿತಾಯವಾಗಲಿದೆ. ಅರ್ಚಕರ ಸಂಘವು 2020 ರಲ್ಲಿ ರಾಜ್ಯದ ಎ ಮತ್ತು ಬಿ ವರ್ಗಗಳ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರಿಗೆ ದೇವಾಲಯಗಳ ಹಣದಿಂದ ಕಾಯ್ದೆ ನಿಯಮಗಳ ಪ್ರಕಾರ ವೇತನ ಇತರೆ ಸೌಲಭ್ಯಗಳನ್ನು ಕೊಡುವಂತಿಲ್ಲ. ಸರ್ಕಾರದ ಸಂಚಿತ ನಿಧಿಯಿಂದ ನೀಡಬೇಕೆಂದು ಇರುತ್ತದೆ. ಆದರೆ ಹಿಂದಿನ ಅದಿಕಾರಿಗಳ ಲೋಪದಿಂದಾಗಿ ಕೋಟ್ಯಾಂತರ ರೂಪಾಯಿ ಹಣ ದುರ್ಬಳಕೆಯಾಗುತ್ತಿತ್ತು. ಈ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘವು 2020 ರಲ್ಲಿ ಮುಖ್ಯಮಂತ್ರಿಗೆ, ಮುಜರಾಯಿ ಸಚಿವರು ಸೇರಿದಂತೆ ಸರ್ಕಾರಕ್ಕೆ ಮನವಿ ಮಾಡಿ ವ್ಯವಸ್ಥೆಯನ್ನು ಸರಿಪಡಿಸಲು ಮನವಿ ಮಾಡಿತ್ತು.

ಸಚಿವ ರಾಮಲಿಂಗಾರೆಡ್ಡಿಗೆ ಅರ್ಚಕರ ಅಭಿನಂದನೆ:

ಈ ಮನವಿ ಹಿನ್ನೆಲೆಯಲ್ಲಿ 131 ಅದಿಕಾರಿ ಸಿಬ್ಬಂದಿಗೆ ಸರ್ಕಾರದಿಂದಲೇ ವೇತನ, ಇತರೆ ಸೌಲಭ್ಯಗಳನ್ನು ಪಡೆಯಲು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಪ್ರಯತ್ನದಿಂದ ಒಂದು ಅತ್ಯಂತ ಮಹತ್ವದ ಆದೇಶ ಹೊರಬಿದ್ದಿದ್ದು ದೇವಾಲಯಗಳ ಕೋಟ್ಯಾಂತರ ರೂಪಾಯಿ ಉಳಿಸಿದ ಕೆಲಸವಾಗಿದೆ ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed