‘ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ’: ಯುವಜನರಿಗೆ ಡಾ. ಪದ್ಮಿನಿ ಪ್ರಸಾದ್ ಸಂದೇಶ

0
Dr.Padmini Prasad 2

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಸ್ತ್ರೀ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮಗಳು ಜೋರಾಗಿದ್ದು, ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ (Dr. Padmini Prasad) ಅವರ ಅಭಿಯಾನ ಗಮನ ಸೆಳೆಯುತ್ತಿದೆ.

ವರ್ಷಗಳಿಂದ ಮಹಿಳಾ ಆರೋಗ್ಯ ಕುರಿತಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಡಾ. ಪದ್ಮಿನಿ ಪ್ರಸಾದ್, ಈ ಬಾರಿ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸರಣಿಯನ್ನು ಕೈಗೊಂಡಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಐಐಐಟಿ ಬೆಂಗಳೂರು (IIIT Bangalore) ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಬೆಳವಣಿಗೆ, ಲೈಂಗಿಕ ಕಿರುಕುಳದಿಂದ ರಕ್ಷಣೆ ಕುರಿತಾಗಿ ಅವರು ವಿವರಿಸಿದರು.

ಇಂದಿನ ಜೀವನಶೈಲಿಯೇ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದ್ದು, ಯುವಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು. ದೀರ್ಘಕಾಲ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಸ್ಪಷ್ಟ ಉತ್ತರ ನೀಡಿದರು.

ಮಾಹಿತಿಯುಕ್ತ ಒಪ್ಪಿಗೆ, ವಿವಾಹಪೂರ್ವ ಸಂಬಂಧಗಳ ಪರಿಣಾಮ, ಲೈಂಗಿಕ ನಡವಳಿಕೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಬಗ್ಗೆ ಜಾಗೃತಿ ಅಗತ್ಯವೆಂದು ಅವರು ಒತ್ತಿ ಹೇಳಿದರು.

ಇದೇ ವೇಳೆ, ಗರ್ಭಕಂಠ ಕ್ಯಾನ್ಸರ್ (Cervical Cancer) ಬಗ್ಗೆ ವಿಶೇಷವಾಗಿ ಎಚ್ಚರಿಕೆ ನೀಡಿದ ಅವರು, ಈ ಕಾಯಿಲೆಯನ್ನು ತಡೆಗಟ್ಟುವ ಸಾಧ್ಯತೆ ಇರುವುದನ್ನು ಉಲ್ಲೇಖಿಸಿದರು. HPV ಲಸಿಕೆ (HPV Vaccine) ಪಡೆಯುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.

ಲಿಂಗ ಸಂವೇದನೆ, ಲಿಂಗ ಗುರುತಿಸುವಿಕೆ ಮತ್ತು ಆರೋಗ್ಯಕರ ಜೀವನ ಶೈಲಿ ಕುರಿತ ಮಹತ್ವದ ಅಂಶಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, “ಎಚ್ಚರಿಕೆಯೇ ಎಲ್ಲಾ ಕಾಯಿಲೆಗಳಿಗೂ ಪರಿಹಾರ” ಎಂದು ಸಂದೇಶ ನೀಡಿದರು.

Leave a Reply

Your email address will not be published. Required fields are marked *

You may have missed