KSRTC ನಿಗಮಗಳಿಗೆ ಈ ಬಾರಿಯದ್ದು ವಿಶೇಷ ನವರಾತ್ರಿ.. ಆಯುಧ ಪೂಜೆಯ ಕೊಡುಗೆ 250 ರೂಪಾಯಿಗಳಿಗೆ ಹೆಚ್ಚಳ..!
ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳಿಗೆ ಈ ಬಾರಿಯ ನವರಾತ್ರಿಯು ಹಿಂದೆಂದಿಗಿಂತ ವಿಶೇಷ..! ಕುತೂಹಲಕಾರಿ ನಿರ್ಧಾರದಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಆಯುಧಪೂಜೆಗೆ ನೀಡಲಾಗಿತ್ತಿದ್ದ ಹಣವನ್ನು 100 ರೂಪಾಯಿಯಿಂದ 250 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಒಂದು ಘಟಕದಲ್ಲಿ ಸರಿ ಸುಮಾರು 100 ರಿಂದ 500 ಬಸ್ಸುಗಳಿರುತ್ತವೆ. ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ / ಕಾರ್ಯಾಗಾರಕ್ಕೆ ನೀಡಲಾಗುತ್ತದೆ.
ಆಯುಧಪೂಜೆಗೆ 2008 ರವರೆಗೂ ರೂ.10 ಪ್ರತಿ ಬಸ್ಸಿಗೆ , 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಗಿತ್ತು. .2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ, 2017 ರಲ್ಲಿ ಪ್ರತಿ ಬಸ್ಸಿಗೆ ರೂ.100 ಕ್ಕೆ ಏರಿಕೆ ಮಾಡಲಾಗಿತ್ತು
ರೂ.100 ಪ್ರತಿ ಬಸ್ಸಿಗೆ ನೀಡುವ ಮೊತ್ತವು 2023 ರವರೆಗೂ ರೂ.100 ಆಗಿತ್ತು. 2024 ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಿಸಲು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿದ್ದಾರೆ. ಅದರಂತೆ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.
BJP ವಿರುದ್ದ ರಾಮಲಿಂಗ ರೆಡ್ಡಿ ಆಕ್ರೋಶ..
ಇದೇ ವೇಳೆ ಆಯುಧ ಪೂಜೆಗೆ ಸಾರಿಗೆ ನಿಗಮಗಳಲ್ಲಿ ಹಣವಿಲ್ಲ ಎಂಬ ಬಿಜೆಪಿ ಟೀಕೆಗೆ ಸಾರಿಗೆ ಸಚಿವ ಎದಿರೇಟು ನೀಡಿದ್ದಾರೆ. ಬಿಜೆಪಿಯವರಿಗೆ ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡಬೇಕಾದರೆ ಸ್ವಲ್ಪವಾದರೂ ಮಾಹಿತಿ ಸಂಗ್ರಹಿಸಿ ಟ್ಟೀಟ್ ಮಾಡಲು ಯಾರಾದರೂ ಪ್ರಜ್ಞಾವಂತರು ಸಲಹೆ ನೀಡಿದರೆ ಒಳ್ಳೆಯದು ಅನ್ನಿಸುತ್ತೆ. ಇಲ್ಲವೆಂದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಳ್ಳುವ ಹಠಕ್ಕೆ ಬಿದ್ದ ಆಗಿದೆ ಅವರ ಪರಿಸ್ಥಿತಿ. ಪ್ರತಿ ಬಾರಿಯೂ ಅವರಿಗೆ ತಿಳುವಳಿಕೆ ನೀಡಿ ಎಂದು ರಾಮಲಿಂಗ ರೆಡ್ಡಿ ಕುಟುಕಿದ್ದಾರೆ.
ತಮ್ಮ ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಳ್ಳಿದ ಪ್ರತಿಯೊಂದು ಅಂಶವನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾಗ್ಯೂ ಸ್ವಲ್ಪ ಕೂಡ ಅರಿವಿಲ್ಲದೆ ಟ್ಟೀಟ್ ಮಾಡಿ ತಮ್ಮ ಮಾರ್ಯಾದೆಯನ್ನು ಈ ರೀತಿ ಹರಾಜು ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಸಹಾನುಭೂತಿ ಇದೆ ಎಂದಿದ್ದಾರೆ.
ಬಿ.ಜೆ.ಪಿ ಸರ್ಕಾರದ ಅವಧಿಯಿಂದ ಅಂದರೆ 2009 ರಿಂದ ಆಯುಧ ಪೂಜೆಗೆ ಪ್ರತಿ ಬಸ್ಸಿಗೆ ನೀಡಲಾಗುತ್ತಿದ್ದ ರೂ.30 ಅನ್ನು ಕಾಂಗ್ರೆಸ್ ಸರ್ಕಾರ 2016 ರಲ್ಲಿ ಪ್ರತಿ ಬಸ್ಸಿಗೆ ರೂ.50 ಕ್ಕೆ ಏರಿಕೆ ಮಾಡಿತು. ಮರುವರ್ಷದಲ್ಲಿಯೇ ನಮ್ಮ ಸರ್ಕಾರ 2017 ರಲ್ಲಿ ರೂ. 50 ಅನ್ನು ರೂ.100 ಕ್ಕೆ ಏರಿಕೆ ಮಾಡಿತು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ಬಸ್ಸಿಗೆ ನೀಡುವ ಮೊತ್ತದಲ್ಲಿ ರೂ.100 ಯಾವುದೇ ಎಳ್ಳಷ್ಟೂ ಬದಲಾವಣೆ ಮಾಡದೇ ಇದ್ದದ್ದು ಬಿ.ಜೆ.ಪಿ ಸರ್ಕಾರದ ಕೀರ್ತಿಪತಾಕೆ ಮತ್ತಷ್ಟು ಹಾರುವಂತೆ ಮಾಡಿದೆ. 2024 ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ ನೀಡಲಾಗುತ್ತಿರುವ ರೂ.100 ಅನ್ನು ರೂ.250 ಕ್ಕೆ ಹೆಚ್ಚಳ ಕೂಡ ನಮ್ಮ ಸರ್ಕಾರದ ಕಾಲದಲ್ಲಿಯೇ ಅಗುತ್ತಿದೆ. ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
@BJP4Karnataka ಅವರಿಗೆ ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡಬೇಕಾದರೆ ಸ್ವಲ್ಪವಾದರೂ ಮಾಹಿತಿ ಸಂಗ್ರಹಿಸಿ ಟ್ಟೀಟ್ ಮಾಡಲು ಯಾರಾದರೂ ಪ್ರಜ್ಞಾವಂತರು ಸಲಹೆ ನೀಡಿದರೆ ಒಳ್ಳೆಯದು ಅನ್ನಿಸುತ್ತೆ. ಇಲ್ಲವೆಂದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಳ್ಳುವ ಹಠಕ್ಕೆ ಬಿದ್ದ ಆಗಿದೆ ಅವರ ಪರಿಸ್ಥಿತಿ.
ಪ್ರತಿ ಬಾರಿಯೂ ಅವರಿಗೆ ತಿಳುವಳಿಕೆ ನೀಡಿ ತಮ್ಮ…
— Ramalinga Reddy (@RLR_BTM) October 9, 2024