ಮೌಡ್ಯತೆಗೆ ಸೆಡ್ಡು ; ಸ್ಮಶಾನದಲ್ಲಿ ವಾಸ್ತವ್ಯ ಹೂಡಲು ಸಚಿವ ಸತೀಶ್ ಜಾರಕಿಹೊಳಿ ಹೊಳಿ

0
jarakiholi- SMASHANA 2015

ಮೌಡ್ಯತೆಗೆ ಸೆಡ್ಡು ಹೊಡೆಯಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಹಾಪರಿ ನಿರ್ಮಾಣ ದಿನವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ.

ಸ್ಮಶಾನವೆಂದರೆ ಭೂತ, ಪ್ರೇತಗಳು ವಾಸಮಾಡುತ್ತವೆ ಎಂಬ ಭ್ರಮೆ ಜನಸಾಮಾನ್ಯರಲ್ಲಿ ಮನೆಮಾಡಿದೆ. ಇಂತಹ ಮೌಢ್ಯಕ್ಕೆ ಸೆಡ್ಡು ಹೊಡೆದಿರುವ ಸಚಿವ ಸತೀಶ್ ಜಾರಕಿಹೊಳಿ ಅಂಬೇಡ್ಕರ್ ಮಹಾಪರಿನಿರ್ವಾಣ ದಿನವಾದ ಭಾನುವಾರ ಸ್ಮಶಾನದಲ್ಲಿಯೇ ವಾಸ್ತವ್ಯ ಹೂಡುವ ಮೂಲಕ ಆಚರಿಸಲು ಮುಂದಾಗಿದ್ದಾರೆ.

ಬೆಳಗಾವಿಯ ಸದಾಶಿವನಗರದಲ್ಲಿರುವ ವೈಕುಂಠಧಾಮದಲ್ಲಿ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಬುದ್ದ, ಬಸವ ಅಂಬೇಡ್ಕರ್ ಜಾಗೃತಿ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು ಹಾಗೂ ಪ್ರಗತಿಪರ ಚಿಂತಕರು, ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಭೋಜನವನ್ನು ಸ್ಮಶಾನದಲ್ಲಿ ಸಿದ್ದಪಡಿಸಲಾಗುತ್ತಿದೆ.

ದೆಹಲಿಯ ಸ್ವಾಮಿ ಅಗ್ನಿವೇಶ ಬಂಧವಾ ಮುಕ್ತ ಮೋರ್ಚಾ, ಬಂತೆ ವಿನಯಕೀರ್ತಿಜಿ, ನಿಷ್ಕಲ ಮಂಟಪ ಬೇಲೂರು ಮಠದ ನಿಜಗುಣಾನಂದ ಸ್ವಾಮಿ, ಡಾ. ಸಿದ್ದಲಿಂಗ ಸ್ವಾಮಿ ಡೊಂಬಳ ಸೇರಿದಂತೆ ಅನೇಕ ಮಠಾಧೀಶರು, ಪವಾಡ ಪುರುಷ ಬಯಲು ಮಾಡುವ ಹುಲಿಕಲ್ ನಟರಾಜ್ ಸೇರಿದಂತೆ ಅನೇಕ ವಿಚಾರವಾದಿಗಳು ಭಾಗವಹಿಸಿದ್ದಾರೆ.

ಡಾ. ಅಂಬೇಡ್ಕರ್ ಜಾಗೃತಿ ತಂಡ, ಭಗವಾನ್ ಬುದ್ದ ತಂಡ ಹಾಗೂ ಬಸವ ತಂಡಗಳಿಂದ ಈಗಾಗಲೇ ಜಿಲ್ಲೆಯಾದ್ಯಂತ ಮೂಢನಂಬಿಕೆ ವಿರುದ್ಧ ಜನರಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಈ ತಂಡಗಳು ಭಾನುವಾರ ಸ್ಮಶಾನದಲ್ಲೇ ಹೂಡಿವೆ.

Leave a Reply

Your email address will not be published. Required fields are marked *