ಖಗೋಳದಲ್ಲಿ ವಿಸ್ಮಯ
ಸೂರ್ಯನ ಅತಿ ಹತ್ತಿರದ ಗ್ರಹ ಮರ್ಕ್ಯುರಿ, ಶುಕ್ರ, ಮಂಗಳ ಹಾಗೂ ಶನಿಗ್ರಹಗಳನ್ನು ನಾವು ನೇರವಾಗಿ ನೋಡಬಹುದಾಗಿದೆ.
ಮಿಲಿಯನ್ ಕಿಲೋಮೀಟರ್ ದೂರದ ಐದು ಗ್ರಹಗಳನ್ನು ಬರಿಗಣ್ಣಿನಿಂದಲೇ ನೋಡುವ ಅಪರೂಪದ ಕ್ಷಣ ದೊರೆತಿದೆ. ಬಾನಿನತ್ತ ದೃಷ್ಟಿ ಇಟ್ಟು ನೋಡಿದರೆ ಅದು ಗೋಚರಿಸಲಿದೆ.
ಸುಮಾರು 45 ನಿಮಿಷಗಳ ಕಾಲ ಈ ಗ್ರಹಗಳು ಮಿನುಗುತ್ತಿದ್ದು, ನಂತರ ಅವು ಮರೆಯಾಗುತ್ತವೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 7 ರಿಂದ 10 ಗಂಟೆಯವರೆಗೂ ಇದನ್ನು ನೋಡಬಹುದಾಗಿದೆ.
ಸೂರ್ಯನ ಸಮೀಪದಲ್ಲಿರುವ ಬುಧ, ಶುಕ್ರ, ಮಂಗಳ, ಗುರು ಹಾಗೂ ಶನಿ ಗ್ರಹಗಳನ್ನು ನೇರವಾಗಿ ನೋಡುವ ಸೌಭಾಗ್ಯ ಲಭಿಸಿದೆ. ಫೆಬ್ರವರಿ 20ರವರೆಗೂ ಸೌರಮಂಡಲದಲ್ಲಿ ಚಮತ್ಕಾರಗಳನ್ನು ವೀಕ್ಷಿಸಬಹುದಾಗಿದೆ. ಆಗಸ್ಟ್ ನಲ್ಲಿ ಮತ್ತೊಮ್ಮೆ ಇಂತಹ ವಿಸ್ಮಯವನ್ನು ನೋಡಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.