ಸಿದ್ದರಾಮಯ್ಯ ಆಮದು ಮುಖ್ಯಮಂತ್ರಿ; ಲೆಹರ್ ಸಿಂಗ್ ಗೇಲಿ
ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಕಾಂಗ್ರೆಸ್ ಆಮದು ಮಾಡಿಕೊಂಡಿರುವ ಮುಖ್ಯಮಂತ್ರಿ ಎಂದು ಬಿಜೆಪಿ ಸಂಸದ ಲೆಹರ್ ಸಿಂಗ್ ಗೇಲಿ ಮಾಡಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಬಿಜೆಪಿ ಸಂಸದ ಲಹರ್ ಸಿಂಗ್ ತಿರುಗೇಟು ಕೊಟ್ಟಿರುವ ವೈಖರಿ ಇದು. “ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇರಲಿಲ್ಲವೇ? ಜೆಡಿಎಸ್ ನಿಂದ ಸಿದ್ದರಾಮಯ್ಯನವರನ್ನು ಆಮದು ಮಾಡಿಕೊಂಡು ಮುಖ್ಯಮಂತ್ರಿ ಮಾಡಲು ಕಾರಣವೇನು?” ಎಂದು ಲೆಹರ್ ಸಿಂಗ್ ಅವರು ಟ್ವೀಟ್ ಮಾಡಿ ಪ್ರಶ್ನೆ ಪ್ರಶ್ನೆ ಮಾಡಿದ್ದಾರೆ.
Karnataka Industries Minister M.B.Patil has asked if there are no competent people in BJP to be Opposition leader and why we are after JDS leader H.D.Kumaraswamy to take the lead. First, they have to answer the question if there were no competent leaders in Congress to be CM? 1/2 pic.twitter.com/FXmxgNiEsP
— Lahar Singh Siroya (Modi Ka Parivar) (@LaharSingh_MP) November 6, 2023
_”ಬಿಜೆಪಿಯಲ್ಲಿ ವಿಪಕ್ಷ ನಾಯಕರಾಗಲು ಸಮರ್ಥರಿಲ್ಲವೇ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಂದಾಳತ್ವ ವಹಿಸಲು ಬಿಜೆಪಿಯವರು ಏಕೆ ಕೇಳುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ಆದರೆ, ಮೊದಲು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಸಮರ್ಥ ನಾಯಕರಿರಲಿಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿ.” ಎಂದು ಲೆಹರ್ ಸಿಂಗ್ ಹೇಳಿದ್ದಾರೆ.
“ಜೆಡಿಎಸ್ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಆಮದು ಮಾಡಿಕೊಂಡಿದ್ದು ಏಕೆ? ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅಥವಾ ಎಂ.ಬಿ.ಪಾಟೀಲ್ ಅವರನ್ನೇ ಏಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ?” ಎಂದು ಲೆಹರ್ ಸಿಂಗ್ ಪ್ರಶ್ನಿಸಿದ್ದಾರೆ.