ಆರೋಗ್ಯ ಕಾಪಾಡಲು ಮತ್ಸ್ಯಾಹಾರ
ಸಮುದ್ರ ಆಹಾರದಲ್ಲಿ ಅಧಿಕ ಪೋಷಕಾಂಶಗಳಿರುತ್ತದೆ. ಇದರಲ್ಲಿ ಕಬ್ಬಿಣದಂಶ ಹಾಗೂ ಸತುವಿನ ಅಂಶ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ದೇಹಕ್ಕೆ ಅವಶ್ಯಕವಿರುವ ಒಮೆಗಾ-3 ಕೊಬ್ಬಿನಂಶವರುತ್ತದೆ. ನಿತ್ಯ ಜೀವನದ ಆನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದ್ರಾಹಾರಗಳು ರಾಮಬಾಣದಂತೆ.
ಆರೋಗ್ಯವಂತ ಹೃದಯ
ಮೀನು ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಸಮುದ್ರಾಹಾರಗಳಲ್ಲಿ ಕೊಬ್ಬಿನಾಸಂ ಕಡಿಮೆ ಇದ್ದು, ಓಮೆಗಾ-3 ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಅಲ್ಲದೆ ಹೃದಯವನ್ನು ಆರೋಗ್ಯವನ್ನಾಗಿಸುತ್ತದೆ. ವಾರಕ್ಕೆ ಒಂದು ಬಾರಿಯಾದರೂ ಮೀನು ಸೇವನೆ ಉತ್ತಮ
ರಕ್ತನಾಳಗಳ ಶುದ್ದೀಕರಣ
ರಕ್ತನಾಳಗಳ ಶುದ್ಧಿಕಾರ್ಯದಲ್ಲೂ ಮೀನಿನ ಮಾಂಸ ಸೇವನೆ ಪ್ರಮುಖ ಪಾತ್ರವಹಿಸುತ್ತದೆ. ಖಿಊಖಔಒಃಔSIS ಖISಏ ಕೂಡ ಕಡಿಮೆಯಾಗುತ್ತದೆ. ಸಮುದ್ರಾಹಾರದಲ್ಲಿರುವುದು ಇಪಿಎ ಮತ್ತು ಡಿಹೆಚ್ ಎ, ಒಮೆಗಾ-3 ಕೊಬ್ಬಿನಾಂಶವು, ದೇಹದಲ್ಲಿ ಉತ್ಪತ್ತಿಯಾಗುವ ಇIಅಔSಂಓಔIಆS, ಅಂದರೆ ರಕ್ತನಾಳಗಳಲ್ಲಿ ರಕ್ತೆ ಹೆಪ್ಪುಗಟ್ಟಲು ಕಾರಣವಾಗುವ ಒಂದು ರೀತಿಯ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.
ಸಂದಿನೋವುಗಳ ಸಮಸ್ಯೆ
ಇತ್ತೀಚಿನ ದಿನಗಳಲ್ಲಿ ಜನರನ್ನು ಸಾಮಾನ್ಯವಾಗಿ ಕಾಡುವ ಕಾಯಿಲೆಗಳಲ್ಲಿ ಅರ್ಥೈಟೀಸ್ ಕೂಡ ಒಂದು. ಸಂದಿಗಳಲ್ಲಿ ನೋವು, ಊತಗಳು ಕಾಣಿಸಿಕೊಳ್ಳುವುದು ಅರ್ಥೈಟೀಸ್ ಲಕ್ಷಣ. ಸಹಿಸಲು ಆಸಾದ್ಯವಾದ ಈ ನೋವುಗಳು ಹಾಗೂ ರೋಗವನ್ನು ನಿಯಂತ್ರಿಸುವಲ್ಲಿ ಸಮುದ್ರಾಹಾರ ಸೇವನೆ ಸಹಕಾರಿ ಎಂಬುದನ್ನು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ…
ಕಣ್ಣಿನ ಆರೋಗ್ಯಕ್ಕೆ
ಎಣ್ಣೆ ಅಂಶ ಹೆಚ್ಚಾಗಿರುವ ಮೀನಿನ ಸೇವನೆ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸುಂದರ ಹೊಳೆಯುವ ಹಾಗೂ ಕಾಂತಿಯುತ ಕಣ್ಣಿಗಾಗಿ ಸಮುದ್ರಾಹಾರ ಸೇವನೆ ಉತ್ತಮ. ಶೆಲ್ ಫಿಶ್ ಗಳಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ, ಇದರ ಸೇವನೆ ಕುರುಡುತನ ಹಾಗೂ ರೆಟಿನಾಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.
ನ್ಯೂಟ್ರಿಷಿಯನ್
ಸಮುದ್ರಾಹಾರಗಳಲ್ಲಿ ಐಯೋಡಿನ್, ಸೆಲೆನಿಯಂ , ಜಿಂಗ್ ಮತ್ತು ಪೋಟಾಷಿಯಂ ಹೇರಳವಾಗಿದ್ದು, ಇವುಗಳು ಥೈರಾಯ್ಡ್, ಹಾಗೂ ಮಾರಕ ಕ್ಯಾನ್ಸರ್ ಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎನ್ನುತ್ತದೆ ವೈದ್ಯಲೋಕ.
ಶ್ವಾಸಕೋಶ ಸಮಸ್ಯೆ ನಿವಾರಣೆ..
ಶ್ವಾಸಕೋಶಗಳ ಆರೋಗ್ಯದಲ್ಲೂ ಸಮುದ್ರಾಹಾರಗಳ ಪಾಲು ಮಹತ್ವದ್ದು. ಮಕ್ಕಳಲ್ಲಿ ಕಂಡುಬರುವ ಅಸ್ತಮಾಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೀನಿನ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ.
ಹೊಳೆಯುವ ತ್ವಜೆ, ಸೌಂದರ್ಯ ವೃದ್ದಿ
ನಿಮ್ಮ ಬಾಹ್ಯ ಸೌಂದರ್ಯ ವೃದ್ದಿಯಲ್ಲೂ ಮೀನಿನ ಪಾತ್ರ ಮಹತ್ವದ್ದು. ಖಇನ್ನತೆ ಸೇರಿದಂತೆ ಅನೇರ ರೀತಿಯ ಮಾನಸಿಕ ಹಾಗೂ ದೈಹಿಕ ರೋಗ ನಿಯಂತ್ರಿಸುವಲ್ಲಿ ಮೀನು ಪ್ರಮುಖ ಪಾತ್ರವಹಿಸುತ್ತದೆ. ಮೀನಿನ ನಿಯಮಿತ ಸೇವನೆಯಿಂದ ಹೊಳೆಯುವ ಕಾಂತಿಯುತ ತ್ವಜೆ ಪಡೆಯಬಹುದು ಎನ್ನುತ್ತಾರೆ ವೈದ್ಯರು..
ಮೆದುಳಿನ ಶಕ್ತಿ ವೃದ್ಧಿ
ಮಾನವನ ಮೆದುಳಿನಲ್ಲಿ ಶೇಕಡಾ 60ರಷ್ಟು ಕೊಬ್ಬಿನಾಂಶ ತುಂಬಿರುತ್ತದೆ. ಅದರಲ್ಲಿ ಹೆಚ್ಚಿನ ಪಾಲು ಆರೋಗ್ಯಕ್ಕೆ ಉತ್ತಮವಾದ ಒಮೆಗಾ-3. ಹೀಗಾಗಿ ಸಮುದ್ರಾಹಾರದಲ್ಲಿ ಒಮೆಗಾ-3 ಇರೋದ್ರಿಂದ ಮೆದುಳಿನ ಶಕ್ತಿ ವೃದ್ದಿಯಾಗುತ್ತದೆ. ಅಲ್ಲದೆ ಡೆಮ್ನಿಷಿಯಾಹಾಗೂ ಮರೆಗುಳಿತನವನ್ನು ತಡೆಗಟ್ಟುತ್ತದೆ. ಮೀನಿನಲ್ಲಿ ಡಿಹೆಚ್ ಎ ಮತ್ತು ಓಮೆಗಾ-3 ಹೆಚ್ಚಿರುವುದರಿಂದ ಮಕ್ಕಳ ಜ್ಞಾಪಕ ಶಕ್ತಿ , ಏಕಾಗ್ರತೆ ವೃದ್ದಿಗೆ ಸಹಕಾರಿ..