ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

0
Prayagraj- mahakumbha mela- Netra mahakumbha

ಪ್ರಯಾಗರಾಜ್‌: ಜಗದ್ವಿಖ್ಯಾತ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ಮಹಾ ಕುಂಭಕ್ಕೆ ಆಗಮಿಸುವ ಭಕ್ತರಿಗಾಗಿ ‘ನೇತ್ರ ಮಹಾಕುಂಭ’ ಹೆಸರಿನ ವಿಶೇಷ ಶಿಬಿರವನ್ನು ಸ್ಥಾಪಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ, ಚಶ್ಮೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ.

ಜನವರಿ 13 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಿಬಿರವು ಅಗತ್ಯವಿರುವವರಿಗೆ ಉಚಿತ ಕಣ್ಣು ಶಸ್ತ್ರಚಿಕಿತ್ಸೆಯನ್ನೂ ಒದಗಿಸುತ್ತಿದ್ದು, ಕಣ್ಣು ದಾನ ಕುರಿತು ಜನಜಾಗೃತಿ ಮೂಡಿಸುತ್ತಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ಸಕ್ಷಮ್ ಫೌಂಡೇಶನ್ ಹಾಗೂ ಇತರ ಸಾಮಾಜಿಕ ಸಂಘಟನೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ದಿನನಿತ್ಯ ಸಾವಿರಾರು ಯಾತ್ರಿಕರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದೆ.

ಈ ಬಾರಿ ‘ನೇತ್ರ ಮಹಾಕುಂಭ’ದ ಉದ್ದೇಶ ಐದು ಲಕ್ಷ ಜನರಿಗೆ ಉಚಿತ ಕಣ್ಣಿನ ಆರೈಕೆ ನೀಡುವ ಪ್ರಯತ್ನ ಸಾಗಿದೆ. ಇದರಲ್ಲಿ ಮೂರು ಲಕ್ಷ ಜನರಿಗೆ ಉಚಿತ ಕಣ್ಣು ಪರೀಕ್ಷೆ, ಚಶ್ಮೆ ಹಾಗೂ ಔಷಧಿ ವಿತರಣೆ ಸೇರಿದಂತೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಒದಗಿಸಲಾಗುತ್ತಿದೆ. ಈ ಶಿಬಿರವನ್ನು ಶಕ್ತಿಮಂತ (ವಿಕಲಚೇತನ) ವ್ಯಕ್ತಿಗಳನ್ನು ಸಬಲಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿರುವ ಸಕ್ಷಮ್ ಫೌಂಡೇಶನ್ ಸೇರಿದಂತೆ ಹಲವಾರು ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ಸಾಗಿದೆ.

ಭಕ್ತರ ಪ್ರಶಂಸೆ:

ಪ್ರಯಾಗರಾಜ್‌ ‘ನೇತ್ರ ಮಹಾಕುಂಭ’ ಶಿಬಿರದಲ್ಲಿ ಪ್ರತಿದಿನ ಸಾವಿರಾರು ಭಕ್ತರು ಕಣ್ಣಿನ ರೋಗಿಗಳ ಚಿಕಿತ್ಸೆಗಾಗಿ ಸುಸಜ್ಜಿತ OPD ವ್ಯವಸ್ಥೆಯಿದ್ದು ಸುಮಾರು 40 ವೈದ್ಯರ ತಂಡ ನಿರಂತರ ಪರೀಕ್ಷೆಯಲ್ಲಿ ತೊಡಗಿದೆ. 100 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಈ ಸೇವೆಯಲ್ಲಿ ತೊಡಗಿದ್ದು ನಿತ್ಯವೂ ಸಾವಿರಾರು ಮಂದಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗತ್ಯ ಔಷಧಿಗಳನ್ನೂ ನೀಡಲಾಗುತ್ತಿದ್ದು, ಅಗತ್ಯವಿದ್ದರೆ ಉಚಿತ ಚಶ್ಮೆ ವಿತರಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಗೆ ಅಥವಾ ಶಸ್ತ್ರಚಿಕಿತ್ಸೆಗೆ ಅಗತ್ಯವಿದ್ದರೆ, ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ, ಉಚಿತವಾಗಿ ಚಿಕಿತ್ಸೆ ಒದಗಿಸಲಾಗುತ್ತದೆ. ಪ್ರತಿ ರೋಗಿಗೆ ಮೂರು ಕಾರ್ಡ್‌ಗಳನ್ನು ನೀಡಲಾಗುತ್ತದೆ.

ಸಮಾಜಿಕ ಜವಾಬ್ದಾರಿ ಮತ್ತು ನೇತ್ರದಾನ ಪ್ರಚಾರ:

‘ನೇತ್ರ ಮಹಾಕುಂಭ’ ಎಷ್ಟೊಂದು ಜನಪ್ರಿಯವಾಗಿತೆಂದರೆ, ಪ್ರಯಾಗರಾಜ್‌ನ ಶಾಂತಿ ಭೂಷಣ್ ಮಿಶ್ರಾ ಅವರು ಈ ಶಿಬಿರವನ್ನು ಶ್ಲಾಘಿಸಿ, ಅದನ್ನು ಒಂದು ಅತ್ಯುತ್ತಮ ಯೋಜನೆ ಎಂದು ಬಣ್ಣಿಸಿದ್ದಾರೆ. ‘ಇದು ಉತ್ತಮ ಉಪಕ್ರಮ, ನೂರಾರು ಜನರಿಗೆ ಉಪಯೋಗವಾಗುತ್ತಿದೆ’ ಎಂಬ ಮಾತುಗಳು ಜನಜನಿತವಾಗಿದೆ.

ಇದೇ ವೇಳೆ, ‘ನೇತ್ರ ಮಹಾಕುಂಭ’ದ ಪ್ರಯೋಜನ ಪಡೆದ ಅನೇಕ ಆಸ್ತಿಕರು ತಮಗೆ ಸಿಕ್ಕಿದ ಚಿಕಿತ್ಸೆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ‘ನಾನು ಕಣ್ಣಿನ ಪರೀಕ್ಷೆಗೆ ಬಂದಿದ್ದೇನೆ, ಈ ಚಿಕೆತ್ಸೆಯ ವ್ಯವಸ್ಥೆಯಿಂದ ಪ್ರೇರೇಪಿತನಾಗಿ ಕಣ್ಣು ದಾನ ಮಾಡುವ ಯೋಚನೆ ಮಾಡಿರುವುದಾಗಿ ಮಹಾಕುಂಭ ಮೇಲಕ್ಕೆ ಆಗಮಿಸಿದ ಭಕ್ತರೊಬ್ಬರು ಹೇಳಿಕೊಂಡಿದ್ದಾರೆ.

‘ನೇತ್ರ ಮಹಾಕುಂಭ’ ಕೇವಲ ವೈದ್ಯಕೀಯ ಸೇವೆ ನೀಡುವುದಲ್ಲದೆ, ಸಾಮಾಜಿಕ ಜವಾಬ್ದಾರಿಯನ್ನು ಪ್ರೇರೇಪಿಸುವ ಹಾಗೂ ಸಹಾನುಭೂತಿಯ ಮನೋಭಾವವನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಈ ವರ್ಷದ ಮಹಾ ಕುಂಭ ಮಹೋತ್ಸವದಲ್ಲಿ ಇದರ ಮಹತ್ವ ಹೆಚ್ಚಾಗಿದೆ ಎಂದು ವಿದೇಶಿ ಮಾಧ್ಯಮಗಳೂ ಬಣ್ಣಿಸಿವೆ.

Leave a Reply

Your email address will not be published. Required fields are marked *

You may have missed