ಮನೆಯ ಮೇಲೊಂದು ಸುಂದರ ಕೈ ತೋಟ!

0

ಮನೆ ಮೇಲೋಂದು ಪುಟ್ಟ ತಾರಸಿ ತೋಟ. ಈ ಕೈ ತೋಟದಲ್ಲಿ ಬೆಳೆಯಲಾಗುತ್ತಿದೆ 18 ತರದ ತರಕಾರಿ, 10 ತರದ ಸಪ್ಪು. ಕಡಿಮೆ ಖರ್ಚಿನಲ್ಲೇ ಎಲ್ಲಾ ತರದ ತರಕಾರಿ ಕೈಗೆ ಸಿಗುತ್ತದೆ ತಾಜಾ ತರಕಾರಿ. ಇದು ಯಾವುದೇ ರಾಸಯನಿಕ ಬಳಸದೇ ಸಾವಯವ ಗೊಬ್ಬರದಿಂದ ತಯಾರಾದ ತರಕಾರಿ. ಜೊತೆಗೆ ಜೇನು ತುಪ್ಪ ಕೂಡ ಇಲ್ಲಿ ಸಿಗುತ್ತದೆ.

ಹೀಗೆ ಮನೆ ಮೇಲೆ ನಿರ್ಮಾಣವಾದ ತರಕಾರಿ ತೋಟ. ಗಿಡಗಳಿಗೆ ನೀರು ಸಿಂಪಡಿಸುತ್ತಿರುವ ಮಹಿಳೆ. ಇನ್ನೂ ಈ ಚಿಕ್ಕ ತೋಟದಲ್ಲಿ ಸಿಗುತ್ತದೆ ಹಲವು ಬಗೆಯ ತರಕಾರಿ. ಇಂಥ ಕೈ ತೋಟ ಇರುವುದು ದಾವಣಗೆರೆಯ ವಿದ್ಯಾನಗರದಲ್ಲಿ.

ಇಲ್ಲಿನ ಶಿವಕುಮಾರ್, ಸವಿತಾ ದಂಪತಿ ತಮಗಾಗಿ ನಿರ್ಮಿಸಿಕೊಂಡ ತಾರಸಿ ತೋಟವಿದು. ಮನೆಯ ಮಹಡಿ ಮೇಲಿನ ಚಿಕ್ಕ ಜಾಗದಲ್ಲೇ ದೊಡ್ಡ ತರಕಾರಿ ತೋಟ ನಿರ್ಮಿಸಿಕೊಂಡಿದ್ದಾರೆ. ಸುಮಾರು 1 ಲಕ್ಷ ಖರ್ಚು ಮಾಡಿ ಈ ತೋಟ ಮಾಡಿದ್ದಾರೆ. ಇಲ್ಲಿ ಟಮೋಟ, ಬದನೆ, ಈರುಳ್ಳಿ, ಬೆಳ್ಳುಳ್ಳಿ, ಹೀರೆಕಾಯಿ ಹೀಗೆ 18 ತರದ ತರಕಾರಿ ಬೆಳೆದಿದ್ಧಾರೆ.

ಜೊತೆ 10 ತರದ ಸಪ್ಪು ಬೆಳೆಯುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಮನೆಯಲ್ಲೇ ಬೆಳೆದ ತರಕಾರಿ ಬಳಸುತ್ತಿದ್ದಾರೆ. ಸ್ನೇಹಿತರ ಸಲಹೆದೊಂದಿಗೆ ಇಂಥ ತಾರಸಿ ತೋಟ ನಿರ್ಮಿಸಿಕೊಮಡಿರುವ ಇವರು ನಿತ್ಯ ತಾಜಾ ತರಕಾರಿ ಬಳಸುತ್ತಿದ್ದಾರೆ.

ಕಡಿಮೆ ಖರ್ಚಲ್ಲೇ ಅತೀ ಹೆಚ್ಚು ತರಕಾರಿ ಬೆಳೆಯುತ್ತಿದ್ದಾರೆ. ತಾವೇ ಸಿದ್ದಪಡಿಸಿರುವ ಈ ತೋಟದಲ್ಲಿ ತಮಗೆ ಬೇಕಾದ ತರಕಾರಿಯನ್ನ ಮನೆಗೆ ಬಳಸುತ್ತಾರೆ. ಕಳೆದ 1 ವರ್ಷದಿಂದ ಇವರು ಮಾರುಕಟ್ಟೆಯಲ್ಲಿ ತರಕಾರಿಯನ್ನೇ ಖರೀದಿ ಮಾಡುತ್ತಿಲ್ಲ. ಈ ತೋಟದಿಂದ ನಿತ್ಯ ಸಮಯ ಹಾಗೂ ಹಣ ಉಳಿತಾಯವಾಗುತ್ತಿದೆ ಎನ್ನುತ್ತಾರೆ ತೋಟದ ಮಾಲೀಕ ಶಿವಕುಮಾರ್.

ಮನೆಯಲ್ಲೇ ತೋಟ ಮಾಡಿಕೊಂಡಿರುವುದು ಇವ ಪತ್ನಿಗೂ ಖುಷಿ ತಂದಿದೆ. ಏಕೆಂದರೆ ನಿತ್ಯ ತಮಗೆ ಬೇಕಾದ ತಾಜಾ ತರಕಾರಿಯಿಂದ ಅಡುಗೆ ಮಾಡಲಾಗುತ್ತದೆ. ವಿಶೇಷ ಎಂದರೆ ಈ ತರಕಾರಿಗೆ ಯಾವುದೇ ರಾಸಾಯನಿಕ ಬಳಸುತ್ತಿಲ್ಲ. ಸಾವಯವ ಗೊಬ್ಬರದಿಂದ ಬೆಳೆದ ಈ ತರಕಾರಿ ಆರೋಗ್ಯಕ್ಕೂ ಅನುಕೂಲ ಎನ್ನುತ್ತಾರೆ ಶಿವಕುಮಾರ್ ಪತ್ನಿ ಸವಿತಾ ಅವರು.

ಇನ್ನೂ ವಿಶೇಷ ಎಂದರೆ ಈ ತೋಟದಲ್ಲೇ ಇದೀಗ ಜೇನು ಸಾಕಣೆ ಕೂಡ ಮಾಡುತ್ತಿದ್ದಾರೆ. ಇಲ್ಲಿನ ತಾಜಾ ಜೇನು ತುಪ್ಪವನ್ನ ಮನೆಗೆ ಬಳಸುತ್ತಾರೆ. ಈ ತಾರಸಿ ತೋಟದಿಂದ ಸಾಕಷ್ಟು ಹಣ ಹಾಗೂ ಸಮಯ ಉಳಿತಾಯ ಮಾಡಬಹುದು ಎಂಬುದು ಇವರ ಅಭಿಪ್ರಾಯ. ಇದೇ ರೀತಿ ಎಲ್ಲರೂ ತಾರಸಿ ತೊಟ ಮಾಡಿದರೆ ತಾಜಾ ತರಕಾರಿ ಜೊತೆಗೆ ಉತ್ತಮ ಆರೋಗ್ಯ ಸಿಗುತ್ತದೆ ಎನ್ನುತ್ತಾರೆ ತೋಟದ ಮಾಲೀಕರು. ಒಟ್ಟಾರೆ, ಕೈ ತೋಟದಿಂದ ಮಾರ್ಕೇಟ್ಗೆ ಹೋಗದೆ ನೆಮ್ಮದಿ ಜೀವನ ನಡೆಸುತ್ತಿರುವುದು ಸತ್ಯ.

Leave a Reply

Your email address will not be published. Required fields are marked *

You may have missed