ಮಹಿಳಾಮಣಿಗಳೇ ನಿರ್ಮಿಸಿರುವ “ರಿಂಗ್ ರೋಡ್ ಸುಮಾ”

0
RING-ROAD-SHUBHA

ರಿಂಗ್ ರೋಡ್ ಸುಮಾ ಚಿತ್ರದ ನಿರ್ಮಾಣ ಹಂತದಿಂದ ಹಿಡಿದು ಬಿಡುಗಡೆಯಾಗುವವರೆಗೂ ಒಂದಿಲ್ಲೊಂದು ವಿಚಾರಗಳಿಗಾಗಿ ಸದ್ದು ಮಾಡುತ್ತಲೇ ಬಂದಿದೆ. ಅಂತು ಇಂತು ಚಿತ್ರ ತೆರೆ ಕಂಡಿದೆ.
ರಿಂಗ್ ರೋಡ್ ಸುಮಾ ಚಿತ್ರದ ಎಲ್ಲಾ ವಿಭಾಗಗಳಲ್ಲಿಯೂ ಮಹಿಳೆಯರೇ ಕಾರ್ಯ ನಿರ್ವಹಿಸಿರುವುದು ಈ ಚಿತ್ರದ ವಿಶೇಷ. ಸುಂದರ ರೂಪದ ಮಹಿಳೆಯ ಕರಾಳ ಮನಸ್ಸಿನ ಕಥೆ ಇದಾಗಿದ್ದು ರಂಜನಿ ರವೀಂದ್ರ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸುಮಾರು 12 ವರ್ಷಗಳ ಹಿಂದಿನ, ರಿಂಗ್ ರೋಡ್ ನಲ್ಲಿ ತನ್ನ ಭಾವಿ ಪತಿಯನ್ನು ಮೊಸದಿಂದ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿಸಿದ ಹಂತಕಿ ಶುಭಾಳ ಕಥೆಯನ್ನು ಪ್ರೇರಣೆಯಾಗಿಟ್ಟುಕೊಂಡು ಅದಕ್ಕೊಂದಿಷ್ಟು ಮಸಾಲೆ, ರಂಜನೀಯ ಅಂಶಗಳನ್ನು ಸೇರಿಸಿ ನಿರ್ಮಿಸಿರುವ ಚಿತ್ರ ರಿಂಗ್ ರೋಡ್.
ಆರಂಭದಲ್ಲಿ ಈ ಚಿತ್ರಕ್ಕೆ ರಿಂಗ್ ರೋಡ್ ಶುಭ ಎಂದು ಶೀರ್ಷಿಕೆ ಇಟ್ಟಾಗ ಸಾಕಷ್ಟು ಪ್ರತಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಿಂಗ್ ರೋಡ್ ಸುಮ ಅಂತ ಬದಲಾವಣೆ ಮಾಡಲಾಯಿತು. ಆದರೆ ಆ ಹೆಸರಿನಲ್ಲಿಯೂ ಕೂಡ ಒಬ್ಬ ಹಂತಕಿ ಇದ್ದದ್ದರಿಂದ ಅಂತಿಮವಾಗಿ ಕೇವಲ ರಿಂಗ್ ರೋಡ್ ಮಾತ್ರ ಇರಲಿ ಎಂದು ಚಿತ್ರತಂಡ ನಿರ್ಧರಿಸಿ, ಅದೇ ಶೀರ್ಷಿಕೆಯೊಂದಿಗೆ ಈಗ ಚಿತ್ರವನ್ನು ರಿಲೀಸ್ ಮಾಡಿದೆ.
ಮುಂಬೈ ಮೂಲದ ಸುಂದರಿ ಖುಷಿ ಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಪ್ರಿಯಾ ಬೆಳ್ಳಿಯಪ್ಪ ಈ ಚಿತ್ರದ ನಿರ್ದೇಶಕಿ.  ಈ ಹಿಂದೆ ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರದಲ್ಲಿ ಸಹ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದ ಪ್ರಿಯಾ ಬೆಳ್ಳಿಯಪ್ಪ ಅವರಿಗಿದು ಮೊದಲ ಪ್ರಯತ್ನ. ನಟ ದುನಿಯಾ ವಿಜಯ್ ಹಾಗೂ ಬೆಡಗಿ ನಿಖಿತಾ ತುಕ್ರಾಲ್ ಜೋಡಿ ಆದರ್ಶ ದಂಪತಿಗಳಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಹಿಳಾಮಣಿಗಳೇ ನಿರ್ಮಿಸಿರುವ ನೈಜ ಘಟನೆಯಾಧಾರಿತ ರಿಂಗ್ ರೋಡ್ ಎಷ್ಟರಮಟ್ಟಿಗೆ ಪ್ರೇಕ್ಷಕರನ್ನು ಮೋಡಿ ಮಾಡಲಿದೆ ಎಂದು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

You may have missed