ರಿವಾ ಸೊಲಂಕಿ ಜೊತೆಗೆ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ನಿಶ್ಚಿತಾರ್ಥ

0
marriage-300x194

ರಾಜ್‌‌ಕೋಟ್: ಇತ್ತೀಚಿಗೆ ಟೀಂ ಇಂಡಿಯಾದ ಮೋಸ್ಟ್ ಬ್ಯಾಚಲರ್ ಆಟಗಾರರೆಲ್ಲ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರೋಹಿತ್ ಶರ್ಮಾ, ಸುರೇಶ್ ರೈನಾ, ಹರಭಜನ್ ಸಿಂಗ್ ಸೇರಿದಂತೆ ಟೀಂ ಇಂಡಿಯಾದ ಕೆಲವು ಆಟಗಾರರು ಇತ್ತೀಚಿಗೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇದೀಗ ಆಲ್ ರೌಂಡರ್ ರವೀಂದ್ರ ಜಡೇಜಾ ಸರದಿ. ಟೀಂ ಇಂಡಿಯಾ ಆಲ್ ರೌಂಡರ್, ಎಡಗೈ ಸ್ವೀನರ್, ಧೋನಿಯ ಪ್ರೀತಿಯ ಸರ್ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಜಡ್ಡು ಎಂದೇ ಖ್ಯಾತಿಯಾಗಿರುವ ಸರ್ ಜಡೇಜ್, ಶುಕ್ರವಾರ ಅವರ ಸ್ವಗ್ರಹದ ರಾಜ್ ಕೋಟ್ ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು.

ಬಹು ದಿನದ ಗೆಳತಿ ರಿವಾ ಸೊಲಂಕಿ ಅವರನ್ನು ವರಿಸುತ್ತಿದ್ದು,  ಶುಕ್ರವಾರ ರಾಜ್‌‌ಕೋಟ್‌‌ನ ಅವರ ಮನೆಯಲ್ಲಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ರಿವಾ ಸೋಲಂಕಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

ರಾಜ್‌ಕೋಟ್‌ನಲ್ಲಿರುವ ರವೀಂದ್ರ ಜಡೇಜಾ ಕುಟುಂಬದ ಒಡೆತನವಿರುವ ರೆಸ್ಟೋರೆಂಟ್ ನಲ್ಲಿ ವಿವಾಹ ನಿಶ್ಚಿತಾರ್ಥ ನಡೆದಿರುವ ಬಗ್ಗೆ ಅವರ ಸಹೋದರಿ ನೈನಾ ಜಡೇಜಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed