VIDEO: ರಜಪೂತ ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ; ಭಯಾನಕತೆಯ ಅನಾವರಣ

Police-Crime-Arreat-2-300x187

ಜೈಪುರ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ ಘಟನೆ ಖಂಡಿಸಿ ಬುಧವಾರ ರಾಜಸ್ಥಾನ ಬಂದ್’ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ರಜಪೂತ ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಖಂಡಿಸಿ ಬೆಂಬಲಿಗರು ರೊಚ್ಚಿಗೆದ್ದಿದ್ದು, ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಉದ್ರಿಕ್ತರು ಹಲವೆಡೆ ಕಲ್ಲು ತೂರಾಟದಲ್ಲಿ ತೊಡಗಿದ್ದರಿಂದ ಅನೇಕ ವಾಹನಗಳು ಜಖಂ ಗೊಂಡಿವೆ.

ಮಂಗಳವಾರ ಇಬ್ಬರು ದುಷ್ಕರ್ಮಿಗಳು ಸುಖದೇವ್ ಸಿಂಗ್ ಗೊಗಮೆಡಿ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದರು. ಈ ಹತ್ಯೆಯ ಸಿಸಿಟಿವಿ ದೃಶ್ಯಾವಳಿ ಹತ್ಯೆಯ ಭಯಾನಕತೆಯನ್ನು ಅನಾವರಣ ಮಾಡಿದೆ.