ಗರ್ಭಿಣಿ ಸ್ತ್ರೀಯರನ್ನು ಕಾಡುವ 5 ವೈರಿಗಳು

0

ಹಾಲು- ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಹೇರಳವಾಗಿರುತ್ತದೆ ನಿಜ. ಆದರೆ ಪಾಶ್ಚೀಕರಿಸಿದ ಹಾಲು ಸೇವನೆ ಕೆಲವೊಂದು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಸಿಹಾಲಿನಲ್ಲಿ ಬ್ಯಾಕ್ಟೀರಿಯಗಳಿದ್ದು ಅದು ತಾಯಿಯಿಂದ ಮಗುವಿಗೆ ಪ್ರವೇಶಿಸಿ ತೊಂದರೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಗರ್ಭಿಣಿಯರು ಅಗತ್ಯಬಿದ್ದಾಗ ಮೊಸರು ಮಜ್ಜಿಗೆಯ ರೂಪದಲ್ಲಿ ಸೇವಿಸುವುದು ಉತ್ತಮ.

ಉಪ್ಪು- ತಾಯಿ ಹಾಗೂಮಗುವಿಗೆ ಸೋಡಿಯಂ ಲವಣಾಂಶ ಅಗತ್ಯವಿದ್ದರೂ ಹೆಚ್ಚಿಗೆ ಸೇವಿಸಿದಾಗ ಕೈಕಾಲು ಊತ ಗರ್ಭಿಣಿಯಲ್ಲಿ ರಕ್ತದೊತ್ತಡ ಹೆಚ್ಚಾಗುವಿಕೆ, ಕಿಡ್ನಿಯಲ್ಲಿ ಕಲ್ಲು ಕಾಣಿಸುವ ಸಾಧ್ಯತೆ ಹೆಚ್ಚು

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸಕ್ಕರೆ- ಇವುಗಳನ್ನು ಮಿತಿಯಲ್ಲಿ ಸೇವಿಸದಿದ್ದರೆ ಗರ್ಭಿಣಿಯರಲ್ಲಿ ಮದುಮೇಹ ಹೆಚ್ಚಾಗಿ ಹುಟ್ಟುವ ಮಗುವಿಗೆ ಸೀಳ್ದುಟಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ಸಕ್ಕರೆ ಬದಲಿಗೆ ಬೆಲ್ಲ ಬಳಕೆ ಉತ್ತಮ.

ಬಿಳಿ ಅಕ್ಕಿ- ತುಂಬಾ ಪಾಲೀಷ್ ಮಾಡಿದ ಅಕ್ಕಿ ಹೆಚ್ಚು ಗ್ಲೈಸಿಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ. ಇವುಗಳ ಸೇವೆನೆಯಿಂದ ಶರೀರಕ್ಕೆ ಹೆಚ್ಚಿನ ಸಕ್ಕರೆ ಅಂಶ ಸೇರ್ಪಡೆಯಾಗಿ ಅದು ರಕ್ತದಲ್ಲಿ ಸೇರಿ ಮದುಮೇಹದಂತಹ ಸಮಸ್ಯೆಯನ್ನು ತಂದೊಡ್ಡುತ್ತದೆ. ಹೀಗಾಗಿ ಗರ್ಭಿಣಿಯಿರು ಕೆಂಪಕ್ಕಿ ಸೇವಿಸುವುದು ಉತ್ತಮ.
ಕಾಫಿ-ಟೀ ಸೇವನೆ- ಗರ್ಭಿಣಿ ಮಹಿಳೆಯರು ಆದಷ್ಟು ಕಾಫಿ ಟೀ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ. ಹಾಗೂ ದಿನಕ್ಕೆ 3 ಲೀಟರ್ ನೀರು ಕುಡಿಯುವುದು ಅಗತ್ಯ

ಬಿಳಿ ಮೈದಾ- ಮೈದಾ ಸೇವನೆಯ ತೂಕವನ್ನು ಹೆಚ್ಚಿಸುತ್ತದೆ. ಇದರಲ್ಲಿ ಕ್ಯಾಲೋರಿ ಜಾಸ್ತಿ ಇರುವುದರಿಂದ ಇದರ ಸೇವನೆ ಕಡಿಮೆ ಮಾಡಿ ಕಂದು ಬಣ್ಣದ ಗೋದಿಯ ಬ್ರೆಡ್ ಸೇವಿಸುವುದು ಉತ್ತಮ

Leave a Reply

Your email address will not be published. Required fields are marked *

You may have missed