ಒಂದೇ ರಾತ್ರಿಯಲ್ಲಿ ಮೊಡವೆಗಳಿಂದ ಮುಕ್ತಿ ಬೇಕಾ…
ಸುಂದರವಾದ ವದನ ಯಾರ ಬಯಕ ಅಲ್ಲ ಹೇಳಿ. ಪ್ರತಿಯೊಬ್ಬರಿಗೂ ಮೊಡವೆ ಮುಕ್ತ ಹೊಳೆಯುವ ತ್ವಜೆ ಪಡೆಯುವ ಬಯಕೆ ಇದ್ದೆ ಇರುತ್ತೆ. ಆದರೆ ದೇಹದ ಹಾರ್ಮೋನುಗಳಲ್ಲಿನ ಬದಲಾವಣೆ ಮುಖದ ಸೌಂದರ್ಯದ ಮೇಲೆ ಒಡ್ಡುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಈ ಮೊಡವೆಯಿಂದ ಮುಕ್ತಿ ಪಡೆಯಲು ಸುಲಬೋಪಾಯ ಇಲ್ಲಿದೆ. ಒಂದೇ ರಾತ್ರಿಯಲ್ಲಿ ಮೊಡವೆಗಳಿಂದ ಮುಕ್ತಿ ಪಡೆಯುವುದು ಹೇಗೆ ಅಂತೀರಾ..
ರಾತ್ರಿ ಮಲಗುವಾಗ ಚಂದನ, ಗಂಧ ಹಾಗೂ ಲಿಂಬೆರಸದ ಮಿಶ್ರಣವನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿ ಮಲಗಿ. ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ಮುಖದ ಮೇಲಿನ ಮೊಡವೆ ಒಣಗಿ ಹೋಗುತ್ತದೆ.
ಇನ್ನೂ ಕಡ್ಲೆಹಿಟ್ಟು ಹಾಗೂ ಅರಶಿನವನ್ನು ಮೊಸರಿನಲ್ಲಿ ಕಲಸಿ ಮುಖಕ್ಕೆ ಲೇಪಿಸುತ್ತಾ ಬಂದಲ್ಲಿ ಮುಖದ ಮೇಲಿನ ಕಲೆ ಮಾಯವಾಗಿ ಸುಂದರ ತ್ವಚೆ ನಿಮ್ಮದಾಗುತ್ತದೆ.
ರೋಸ್ ವಾಟರ್ ಹಾಗೂ ಶ್ರೀಗಂಧದ ಪುಡಿಯ ಮಿಶ್ರಣವನ್ನು ಹಚ್ಚಿ ಮಲಗಿ ಬೆಳಗ್ಗೆ ಎದ್ದು ಮುಖ ತೊಳೆಯುವುದರಿಂದ ತ್ವಜೆ ಕಾಂತಿಯುತವಾಗುತ್ತದೆ ಹಾಗೂ ಕಲೆಮುಕ್ತವಾಗುತ್ತದೆ.
ಆರೆಂಜ್ ಹಣ್ಣಿನ ಸಿಬ್ಬೆಯ ರಸವನ್ನು ಮೊಡವೆ ಇರುವ ಜಾಗಕ್ಕೆ ಲೇಪಿಸುವಿದರಿಂದಲೂ ಮೊಡವೆ ಮಾಯವಾಗುತ್ತದೆ.