ಕಾರಾಗೃಹಕ್ಕೆ ಗೃಹ ಸಚಿವರ ಭೇಟಿ; ಖೈದಿಗಳೊಂದಿಗೆ ಹಾಡಿ ಭಾವುಕರಾದ ಪರಮೇಶ್ವರ್

0
PARAMESWAR VISIT JAIL

ಗೃಹ ಸಚಿವ ಜಿ.ಪರಮೇಶ್ವರ್ ಇಂದು ಮೈಸೂರಿನ ಕೇಂದ್ರಿ ಕಾರಾಗೃಹಕ್ಕೆ ಭೇಟಿ ನೀಡಿದರು. ವಿಶೇಷವೆಂದರೆ ಸಚಿವರು ಖೈದಿಗಳೊಂದಿಗೆ ಮಾತುಕತೆ ನಡೆಸಿದ  ಬಳಿಕ ‘ಕರುನಾಡ ತಾಯಿ ಸದಾ ಚಿನ್ಮಯಿ’ ಎಂಬ ಹಾಡು ಹಾಡಿ ಗಮನ ಸೆಳೆದರು.

ಶುಕ್ರವಾರ ಮೈಸೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಅಯೋಜಿಸಿದ್ದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೃಹ ಸಚಿವ ಜಿ.ಪರಮೇಶ್ವರ್, ನಂತರ ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು.

ಈ ವೇಳೆ ಕೈದಿಗಳಿಂದಲೇ ರೂಪಿತಗೊಂಡಿದ್ದ ಪರಿವರ್ತನಾ ಬ್ಯಾಂಡ್ನವರು ಸಚಿವರನ್ನು ಸ್ವಾಗತಿಸಲು ‘ಕರುನಾಡು ತಾಯಿ ಸದಾ ಚಿನ್ಮಯಿ’ ಎಂಬ ಹಾಡನ್ನು ಹಾಡುತ್ತಿದ್ದಾಗ ಭಾವುಕರಾದ ಗೃಹ ಸಚಿವರು ಪರಿವರ್ತನಾ ತಂಡದ ಸದಸ್ಯರ ಮೈಕನ್ನು ತೆಗೆದುಕೊಂಡು ತಾವು ಕೂಡ ಕರುನಾಡು ತಾಯಿ ಸದಾ ಚಿನ್ಮಯಿ… ಎಂದು ಹಾಡಿ ಗಮನ ಸೆಳೆದರು.

ಗೃಹ ಸಚಿವರು ಭಾವುಕರಾಗಿ ಹಾಡು ಹೇಳುತ್ತಿದ್ದಂತೆ ಆಶ್ಚರ್ಯದಿಂದ ಕಾರಾಗೃಹದ ಎಡಿಜಿಪಿ ಕಮಲ್ ಪಂಥ್ ಸೇರಿದಂತೆ ಇತರ ಪೊಲೀಸ್ ಹಿರಿಯ ಅಧಿಕಾರಿಗಳು ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಕ್ಲಿಕ್ಕಿಸಿ ಗಮನ ಸೆಳೆದರು.

Leave a Reply

Your email address will not be published. Required fields are marked *

You may have missed