ಭಾರತದ ದಾಳಿಗೆ ಅಕ್ಷರಶಃ ಬೆಚ್ಚಿದ ಪಾಕಿಸ್ತಾನ: ವಿಮಾನ ನಿಲ್ದಾಣಗಳಲ್ಲಿ ತುರ್ತು ಪರಿಸ್ಥಿತಿ

0
Pak army- baluchistan

ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿ ಮೂಲಕ ಭಾರತೀಯ ಮಹಿಳೆಯರ ಸಿಂಧೂರ ಅಳಿಸಿದ್ದ ಉಗ್ರರನ್ನು ‘ಸಿಂಧೂರ ಆಪರೇಷನ್’ ಮೂಲಕವೇ ಭಾರತೀಯ ಸೇನೆ ಧಮನ ಮಾಡಿದೆ. ಅಷ್ಟೇ ಅಲ್ಲ, ತನ್ನನ್ನು ಮುಟ್ಟಿದರೆ ಸುತ್ತು ಹೋಗುವಿರೆಂಬ ಸಂದೇಶವನ್ನೂ ಭಾರತವು ಜಗತ್ತಿಗೆ ರವಾನಿಸಿದೆ.

ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ಸೇನೆ ಮಧ್ಯ ರಾತ್ರಿಯೇ ‘ಸಿಂಧೂರ ಆಪರೇಷನ್’ ಹೆಸರಲ್ಲಿ ವಾಯುದಾಳಿ ನಡೆಸಿದ್ದು, ಇನ್ನೂ ಬೆಳಕು ಹರಿಯುವಷ್ಟರಲ್ಲೇ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಲಾಗಿದೆ.

ಯಾವ್ಯಾವ ಸ್ಥಳಗಳ ಮೇಲೆ ಭಾರತ ದಾಳಿ?

ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲ ಪಾಕಿಸ್ತಾನ ನೆಲಕ್ಕೂ ನುಗ್ಗಿ ಹೊಡೆಯಲಾಗಿದೆ. ಬಹವಾಲ್ಪುರ್, ಕೋಟ್ಲಿ, ಮುರಿಡ್ಕೆ, ಬಾಗ್ ಮತ್ತು ಮುಜಫರಾಬಾದ್‌ಗಳ ಮೇಲೆ ಭಯಾನಕ ದಾಳಿ ನಡೆಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಗ್ರರು ಮಸೀದಿಯಲ್ಲಿ ಅಡಗಿದ್ದರೂ ದಾಳಿಯಿಂದ ಹಿಂದೆ ಸರಿಯದ ಸೇನೆ ಪ್ರಬಲ ದಾಳಿ ನಡೆಸಿದೆ.

ಭಾರತದ ಈ ಮಿಲಿಟರಿ ದಾಳಿಗೆ ಬೆಚ್ಚಿರುವ ಪಾಕಿಸ್ತಾನ ಸರ್ಕಾರವು ಲಾಹೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಪಾಕಿಸ್ತಾನದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದ್ದು, ಪ್ರಯಾಣಿಕರಿಗೆ ತಕ್ಷಣವೇ ಟರ್ಮಿನಲ್ ಖಾಲಿ ಮಾಡುವಂತೆ ಆದೇಶಿಸಲಾಗಿದ್ದು, ದಾಳಿಯ ನಂತರ, ಅನೇಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನದ ಲಾಹೋರ್ ಮತ್ತು ಸಿಯಾಲ್‌ಕೋಟ್ ವಿಮಾನ ನಿಲ್ದಾಣಗಳನ್ನು ಮುಂದಿನ 48 ಗಂಟೆಗಳ ಕಾಲ ಮುಚ್ಚಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *