ಮಹಾ ಕುಂಭಮೇಳದಲ್ಲಿ ‘ಒಡೆಲಾ 2’ ಟೀಸರ್ ಬಿಡುಗಡೆ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಅಭಿನಯದ ‘ಒಡೆಲಾ 2′ ಸಿನಿಮಾ ಟೀಸರ್’ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದೆಬ್ಬಿಸಿದೆ. ಒಡೆಲಾ ಸಿನಿಮಾದ ಮುಂದುವರೆದ ಭಾಗವಾಗಿರುವ ‘ಒಡೆಲಾ 2’ ಹಲವಾರು ಕ್ರಿಯಾತ್ಮಕ ಪ್ರಯೋಗಗಳಿಂದ ಗಮನಸೆಳೆದಿದೆ. ಬೋಲ್ಡ್ ಪಾತ್ರಗಳಿಂದ ಗಮನಸೆಳೆಯುತ್ತಿರುವ ನಟಿ ತಮನ್ನಾ ಭಾಟಿಯಾ ‘ಒಡೆಲಾ 2’ನಲ್ಲಿ ಸಾದ್ವಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ‘ಒಡೆಲಾ 2’ ಟೀಸರ್ ಬಿಡುಗಡೆಯಾಗಿದೆ. ತಮನ್ನಾ ಅವರು ಸಾದ್ವಿ ಲುಕ್’ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಇದರ ಟೀಸರ್ ಮಹಾ ಕುಂಭಮೇಳದಲ್ಲಿ ಬಿಡುಗಡೆಯಾಗುವುದಕ್ಕೂ ಏನೂ ಸಂಬಂಧವಿಲ್ಲ. ಆದರೂ ತಮನ್ನಾ ಸಾಧ್ವಿಯಾದರೇ ಎಂಬ ನೆಟ್ಟಿಗರ ಪ್ರತಿಕ್ರಿಯೆಗಳೂ ಗಮನಸೆಳೆದಿವೆ.