ನ್ಯಾಚುರಲ್ ಹೇರ್ ಸ್ಟ್ರೈಟ್ನರ್
ಉದ್ದ ಹಾಗೂ ಸ್ಟ್ರೈಟ್ ಹೇರ್ ಇರಬೇಕು ಎಂಬುದು ಯಾವ ಯುವತಿಯರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬ ಯುವತಿಯರು ತಮ್ಮ ಸೌಂದರ್ಯ ಇಮ್ಮಡಿಗೊಳಿಸುವ ಸಲುವಾಗಿ ಬ್ಯೂಟಿ ಪಾರ್ಲರ್ ಗೆ ತೆರಳಿ ಕೂದಲನ್ನು ಸ್ಟ್ರೈಟ್ ಮಾಡಿಕೊಳ್ಳುತ್ತಾರೆ. ಆದರೆ ಮನೆಯಲ್ಲಿಯೇ ನ್ಯಾಚುರಲ್ ಆಗಿ ಹೇರ್ ಸ್ಟ್ರೈಟ್ ಮಾಡುವ ವಿಧಾನ ಇಲ್ಲಿದೆ ನೋಡಿ
ತೆಂಗಿನ ಕಾಯಿ -ನಿಂಬೆಹಣ್ಣಿನ ರಸ
ತೆಂಗಿನ ಕಾಯಿಯ ಹಾಲು ನ್ಯಾಚರಲು ಹೇರ್ ಸ್ಟ್ರೈಟ್ ನರ್ ಎಂದೇ ಖ್ಯಾತಿ ಪಡೆದಿದೆ. ಇದಕ್ಕೆ ಇನ್ನೂ ನಿಂಬೆಹಣ್ಣಿನ ರಸ ಸೇರಿಸಿದರೆ ಉತ್ತಮ ರಿಸಲ್ಟ್ ಪಡೆಯಬಹುದಾಗಿದೆ. ತೆಂಗಿನ ಹಾಲು ಹಾಗೂ ನಿಂಬೆರಸವನ್ನು ಸೇರಿಸಿ ಈ ಮಿಶ್ರಣವನ್ನು ಕೆಲವು ಕಾಲದವರೆಗೆ ಪ್ರಿಜ್ ನಲ್ಲಿಡಿ. ಬಳಿಕ ಇದನ್ನು ಕೂದಲಿಗೆ ಹಾಕಿ ಟವೆಲ್ ನಲ್ಲಿ ಹಾಕಿ ಒಂದು ಗಂಟೆಗಳ ಕಾಲ ಬಿಡಿ. ಬಳಿಕ ಶಾಂಪುವಿನಿಂದ ಕೂದಲು ತೊಳೆಯಿರಿ.
ಬಿಸಿ ಎಣ್ಣೆ ಚಿಕಿತ್ಸೆ:
ತಲೆಕೂದಲಿಗೆ ಕೊಂಚ ಬಿಸಿ ಎಣ್ಣೆ ಬಳಸಿ ಬಳಿಕ ಮಸಾಜ್ ಮಾಡಿ. ದಿನಬಿಟ್ಟು ದಿನ ಈ ರೀತಿ ಮಾಡುವುದರಿಂದ ನೇರ ಕೂದಲು ನಿಮ್ಮದಾಗಸಿಕೊಳ್ಳಬಹುದು. ತೆಂಗಿನ ಎಣ್ಣೆಗೆ, ಆಲಿವ್ ಎಣ್ಣೆಯನ್ನು ಸೇರಿಸಿ ಬಳಲುವುದರಿಂದ ಇನ್ನೂ ಉತ್ತಮ ಪಲಿತಾಂಶ ಪಡೆಯಬಹುದಾಗಿದೆ.
ಕಂಡೀಷನರ್:
ತಲೆಕೂದಲು ತೊಳೆದ ಬಳಿಕ ಕಂಡೀಷನರ್ ಬಳಸುವುದರಿಂದಲೂ ಕೂದಲು ಸ್ಟ್ರೈಟ್ ಆಗುತ್ತೆ. ಟೀ ಡಿಕಾಂಕ್ಷನ್ ನ್ಯಾಚುರಲ್ ಕಂಡೀಷನರ್ ನಂತೆ ಕಾರ್ಯನಿರ್ವಹಿಸುತ್ತದೆ
ಹಾಲು ಮತ್ತು ಜೇನು
ಹಾಲಿಗೆ ಜೇನುಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಬಾಳೆಹಣ್ಣು ಅಥವ ಸ್ಟ್ರಾಬೆರಿ ಹಾಕಿ ಸ್ಮಾಶ್ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಳಿಕ ತೊಳೆಯಿರಿ.
ಆಲಿವ್ ಎಣ್ಣೆ ಮತ್ತು ಮೊಟ್ಟೆ:
ಆಲಿವ್ ಎಣ್ಣೆ ಮತ್ತು ಮೊಟ್ಟೆ ಯ ಮಿಶ್ರಣವನ್ನು ತಲೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಎರಡು ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಿಶ್ರಣವನ್ನು ಕೂದಲಿಗೆ ಹಚ್ಚಿ ಒಂದು ಗಂಟೆಯ ಬಳಿಕ ಕೂದಲು ತೊಳೆಯಿರಿ.