ರಾಜಕೀಯ ನನಗೆ ಆಸಕ್ತಿ ಇಲ್ಲ ; ಯದುವೀರ್ ಒಡೆಯರ್

0
mysore_palace_night-768x576

ರಾಜಕೀಯ  ಪ್ರವೇಶ ಮಾಡಲು ಸಧ್ಯ ನನಗೆ ಆಸಕ್ತಿ ಇಲ್ಲಾ. ರಾಜಕೀಯಕ್ಕೆ ಬರುವಂತೆ ನನಗೆ ಯಾವುದೇ ರಾಜಕೀಯ ಪಕ್ಷವೂ ಸಂಪರ್ಕ ಮಾಡಿಲ್ಲ ಎಂದು ಮೈಸೂರು ರಾಜ ವಂಶಸ್ಥ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಮಂಡ್ಯದಲ್ಲಿ  ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ  ನೂತನ  ಕಟ್ಟಡದ ಉದ್ಘಾಟನೆಯನ್ನು ಮೈಸೂರು ರಾಜವಂಶಸ್ಥ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ನೆರವೇರಿಸಿದರು.. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯದುವೀರ್,  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು  ನಾಲ್ಕು  ಬಾರಿ ಸಂಸದರಾಗಿದ್ದರು.  ಅವರಿಗೆ ಸಾಕಷ್ಟು ರಾಜಕೀಯ ಅನುಭವವಿತ್ತು. ನಾನು ರಾಜಕೀಯವಾಗಿ ಕಲಿಯೋದು ಬಷಳಷ್ಟಿದೆ. ಆದ್ದರಿಂದ ಸಧ್ಯಕ್ಕೆ ರಾಜಕೀಯ ಪ್ರವೇಶಿಸುವ ಮನಸ್ಸು ಮಾಡಿಲ್ಲ ಎಂದರು.

ಮೈಸೂರಿನ  ಕ್ಲಬ್ ಚುನಾವಣೆಯಲ್ಲಿ  ಸ್ಫರ್ಧೆ ಮಾಡಿದ್ದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯುವರಾಜ ಒಡೆಯರ್, ಬಿಪಿಸಿ, ಎಂ.ಆರ್.ಸಿ ಕ್ಲಬ್ಗಮಳಿಗೆ ಅರಮನೆಯಿಂದಲೇ ಜಾಗ ಕೊಟ್ಟಿದ್ದು, ನಮ್ಮ ಮತ್ತು ಕ್ಲಬ್ ಸಂಬಂಧ ಬಲಿಷ್ಠಗೊಳಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು..
ಇದೇ ಸಂದರ್ಭದಲ್ಲಿ ಮದುವೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮದುವೆ ಉಸ್ತುವಾರಿಯನ್ನು ನಮ್ಮ ತಾಯಿಯವರೇ ವಹಿಸಿದ್ದು, ಯಾರು ಯಾರಿಗೆ ಆಹ್ವಾನ ಕೊಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದರು.

Leave a Reply

Your email address will not be published. Required fields are marked *