ಮುಂಬೈನ ಪ್ರಸಿದ್ಧ ಹೊಟೇಲ್18 ಕೋ.ರೂಗೆ ಮಾರಾಟಕ್ಕಿದೆ. ಖರೀದಿಸುವ ದಮ್ ನಿಮಗಿದೆಯಾ..?

0
delhi-zaika HOTEL

ಇದು ಮುಂಬೈನಲ್ಲಿರುವ ಪ್ರಸಿದ್ದ ಹೊಟೇಲ್ . ಹೆಸರು ದೆಹಲಿ ಜೈಕಾ. ಈ ಹೊಟೇಲ್ ಇದೀಗ ಹರಾಜಿಗಿದೆ. ದಶಕಗಳ ಹಿಂದಿನಿಂದಲೂ ಮಿಲಿಯನ್ ಗಟ್ಟಲೆ ವ್ಯಾಪಾರ ನಡೆಸುತ್ತಿದ್ದ ಈ ರೆಸ್ಟೋರೆಂಟ್ ಇದೀಗ ಸುದ್ದಿಯಲ್ಲಿದೆ.

ಮಹಾರಾಷ್ಟ್ರ ಹರಾಜಿಗೆ ಇಟ್ಟಿರುವ ಈ ರೆಸ್ಟೋರೆಂಟ್ ನ ಮೂಲಬೆಲೆ ಕೇವಲ18 ಕೋಟಿ ರೂಪಾಯಿ. ಡಿಸೆಂಬರ್ 9ರಂದು ಈ ರೆಸ್ಟೋರೆಂಟ್ ಹರಾಜಾಗಲಿದ್ದು, ಖರೀದಿಸುವ ದಮ್ ಇದ್ದವರು ಮುಂದೆ ಬರಬಹುದು. ಆದರೆ ಖರೀದಿ ಮಾಡುವವರು ಯಾರಿದ್ದಾರೆ ಎಂಬುದು ಈಗಿನ ಕುತೂಹಲ. ಯಾಕೆಂದರೆ ಇದರ ಮೂಲ ಮಾಲೀಕ ದಾವೂದ್ ಇಬ್ರಾಹಿಂ.

1983ರ ಮುಂಬೈ ಸರಣಿ ಸ್ಪೋಟದ ನಂತರ ಈ ಹೊಟೇಲ್ ಅನ್ನು ಮಹಾರಾಷ್ಟ್ರ ಸರ್ಕಾರ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಈ ಹೊಟೇಲ್ ಹರಾಜಿಗಿದ್ಗು, ಈ ದೆಹಲಿ ಜೈಕಾ ಪರ ಜೈಕಾರ ಹಾಕಲು ಯಾರಾದರೂ ಮುಂದೆ ಬರಬಹುದೆ ಎಂಬುದು ಮುಂದಿನ ಪ್ರಶ್ನೆ….

Leave a Reply

Your email address will not be published. Required fields are marked *

You may have missed