ನಿಮಗೆ ಗೊತ್ತಿಲ್ಲದ ಮುಲ್ತಾನಿ ಮುಟ್ಟಿಯ ಪ್ರಯೋಜನಗಳು
ಮುಲ್ತಾನಿ ಮಿಟ್ಟಿ.. ಇದು ಎಲ್ಲಾ ರೀತಿಯ ಚರ್ಮಗಳಿಗೆ ಹೊಂದುವಂತಹದ್ದು. ಒಂದು ವೇಳೆ ನಿಮ್ಮದು ಎಣ್ಣೆ ಚರ್ಮವಾಗಿದ್ದರೆ ಮುಲ್ತಾನಿ ಮಿಟ್ಟಿಗೆ ಸ್ಪಲ್ಪ ರೋಸ್ ವಾಟರ್ ಬೆರೆಸಿ ಅದನ್ನು ತ್ವಜೆಗೆ ಹಚ್ಚಿ. ಒಣ ಚರ್ಮವಾಗಿದ್ದರೆ ಮುಲ್ತಾನಿ ಮಿಟ್ಟಿಯನ್ನು ಬಾದಾಮಿ ಎಣ್ಣೆ ಹಾಗೂ ಹಾಲಿನೊಂದಿಗೆ ಬೆರೆಸಿ ಹಚ್ಚಿ. ಈ ರೀತಿ ಮಾಡುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ.
- ಮುಲ್ತಾನಿ ಮುಟ್ಟಿ ಮೊಡವೆ ನಿವಾರಕವೂ ಹೌದು. ಟೊಮೊಟೋ ಜ್ಯೂಸ್ ಜೊತೆಗೆ ಸ್ಪಲ್ಪ ಮುಲ್ತಾನಿ ಮುಟ್ಟಿ, ಅರಶಿನ ಮತ್ತು ಗಂಧದ ಪುಡಿಯನ್ನು ಸೇರಿಸಿ ಮುಖಕ್ಕೆ ಲೇಪಿಸಿ ಹತ್ತು ನಿಮಿಷದ ಬಳಿಕ ಮುಖ ತೊಳೆಯಿರಿ. ಮೊಡವೆಗಳ ಕಲೆಯನ್ನು ನಿವಾರಣೆ ಮಾಡಬೇಕೆಂದರೆ, ಮುಲ್ತಾನಿ ಮಿಟ್ಟಿಯೊಂದಿಗೆ ನೀಮ್ ಪೇಸ್ಟ್, ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುತ್ತಾ ಬಣ್ಣಿ
- ಬಾಡಿ ವಾಶ್ ಆಗಿಯೂ ಮುಲ್ತಾನಿ ಮಿಟ್ಟಿ. ದೇಹದ ಚರ್ಮ ಕಾಂತಿಯುತವಾಗಿ ಹಾಗೂ ನಯವಾಗಿ ಇರಬೇಕೆಂದರೆ ಮುಲ್ತಾನಿ ಮುಟ್ಟಿಯನ್ನು ಬಳಸಬಹುದು. ಒಂದು ಕಪ್ ಓಟ್ ಮಿಲ್ ಗೆ ನೀಮ್ ಪೌಡರ್ , ಒಂದು ಚಮಚ ಮುಲ್ತಾನಿ ಮುಟ್ಟಿಯನ್ನು ಬೆರೆಸಿ ಅದಕ್ಕೆ ಚಂದನ ಹಾಕಿ. ಬಳಿಕ ಹಾಲಿನೊಂದಿಗೆ ಸೇರಿಸಿ ದೇಹಕ್ಕೆ ಲೇಪಿಸಿ. ಈ ರೀತಿ ವಾರಕ್ಕೆ ಒಂದು ಬಾರಿಯಾದರೂ ಮಾಡುವುದರಿಂದ ಉತ್ತಮ ತ್ವಜೆ ಪಡೆಯಬಹುದಾಗಿದೆ.
- ಶಾಂಪೂ ಜೊತೆಗೆ ಮುಲ್ತಾನಿ ಮುಟ್ಟಿ…! ಹೌದು ಶಾಂಪು ಜೊತೆಗೆ ಮುಲ್ತಾನಿ ಮುಟ್ಟಿ ಸೇರಿಸಿ ಕೂದಲನ್ನು ತೊಳೆಯುವುದರಿಂದ ಕೂದಲಿಗೆ ಹೊಸ ಜೀವ ಬಂದಂತಾಗುತ್ತದೆ. ಮುಲ್ತಾನಿ ಮಿಟ್ಟಿ ಕ್ಲೆನ್ಲಿಂಗ್ ಏಜೆಂಟ್ ನಂತೆ ಕ್ರಿಯೆ ಮಾಡುವುದರಿಂದ ನೆತ್ತಿಯ ಮೇಲಿನ ಅತೀಯಾದ ಜಿಡ್ಡನ್ನು ತೆಗೆಯುತ್ತದೆ. ಅಲ್ಲದೆ ಕಂಡೀಷನರ್ ನಂತೆಯೂ ವರ್ತಿಸುತ್ತದೆ.
- ಸ್ಲೀಟ್ ಎಂಟ್ ಗೆ ಬೈಬೈ- ಮುಲ್ತಾನಿ ಮುಟ್ಟಿಯನ್ನು ಹೇರ್ ಪ್ಯಾಕ್ ರೀತಿ ಬಳಸುವುದರಿಂದ ಸ್ಲಿಟ್ ಎಂಡ್ ನಿಂದ ದೂರವಾಗಬಹುದು. ರಾತ್ರಿ ತಲೆಗೆ ಎಣ್ಣೆ ಹಚ್ಚಿ ಮಲಗಿ. ಬೆಳಗ್ಗೆ ಬಿಸಿ ನೀರಿನಿಂದ ಅದ್ದಿದ ಟೆವೆಲ್ ನಿಂದ ತಲೆಯನ್ನು ಕವರ್ ಮಾಡಿ. ಒಂದು ಗಂಟೆಯ ಬಳಿಕ ಮೊಸರಿನೊಂದಿಗೆ ಬೆರೆಸಿದ ಮುಲ್ತಾನಿ ಮಿಟ್ಟಿಯ ಪ್ಯಾಕ್ ಅನ್ನು ತಲೆಗೆ ಹಚ್ಚಿ ಸ್ಪಲ್ಪ ಸಮಯದ ಬಳಿಕ ತೊಳೆಯಿರಿ. ಮರುದಿನ ಶ್ಯಾಂಪೂ ಹಾಗೂ ಕಂಡೀಷನರ್ ಬಳಸಿ ಕೂದಲು ತೊಳೆಯಿರಿ. ಪ್ರತಿವಾರ ಈ ರೀತಿ ಮಾಡುವುದರಿಂದ ನಿಮ್ಮ ಕೂದಲ ಸಮಸ್ಯೆ ನಿವಾರಣೆಯಾಗುತ್ತದೆ
- ರಕ್ತ ಚಲನೆಯಲ್ಲಿ ಪ್ರಮುಖ ಪಾತ್ರ- ಮುಲ್ತಾನಿ ಮುಟ್ಟಿ ರಕ್ತ ಚಲನೆಯನ್ನು ಹೆಚ್ಚಿಸುವುದರಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಸುಸ್ತಾದ ಕಾಲು, ತೊಡೆ ಅಥವ ಇನ್ನಿತರ ಭಾಗಕ್ಕೆ ಮುಲ್ತಾನಿ ಮುಟ್ಟಿಯನ್ನು ಹಚ್ಚುವುದರಿಂದ ಒಂದು ರೀತಿಯಾಗಿ ಶಮನ ಸಿಗುತ್ತದೆ.
- ಒಂದು ವೇಳೆ ನಿಮಗೆ ಮೂಳೆಗಳಲ್ಲಿ ನೋವು ಅಥವ ಯಾವುದಾದರೂ ಕ್ರಿಮಿಕೀಟಗಳು ಕಡಿದು ನೋವಾಗಿದ್ದರೆ ಆ ಜಾಗಕ್ಕೆ ಮುಲ್ತಾನಿ ಮುಟ್ಟಿಯ ಪೇಸ್ಟ್ ಹಚ್ಚಬಹುದು.
- ಬಟ್ಟೆಯಲ್ಲಿನ ಕೊಳೆ ನಿವಾರಕವಾಗಿಯೂ ಮುಲ್ತಾನಿ ಮುಟ್ಟಿ- ಬಟ್ಟೆಯಲ್ಲಿ ಆಗಿರುವ ರಕ್ತ ಸೇರಿದಂತೆ ಇನ್ನಿತರ ಕಲೆಗಳನ್ನು ನಿವಾರಣೆ ಮಾಡುವಲ್ಲೂ ಇದರ ಪಾತ್ರ ಪ್ರಮುಖದ್ದು. ಕಲೆಯಾದ ಜಾಗವನ್ನು ನೀರಿನಲ್ಲಿ ಒದ್ದೆ ಮಾಡಿ ಬಳಿಕ ಆ ಜಾಗಕ್ಕೆ ಮುಲ್ತಾನಿ ಮಿಟ್ಟಿಯನ್ನು ಹಾಕಿ ಬಳಿಕದ ಮ್ಯಾಜಿಕ್ ನೀವೆ ನೋಡಿ..