ಭೂಸ್ವಾಧೀನ ಅಕ್ರಮ ಆರೋಪದ ಪ್ರತಿಧ್ವನಿ; ದೂರು ಪರಿಶೀಲನೆಯಲ್ಲಿರುವಾಗಲೇ ಅಧಿಕಾರಿಯ ಪರ ನಿಂತ ಸಚಿವ; ಭೂಸ್ವಾಧೀನಾಧಿಕಾರಿ ವರ್ಗಾವಣೆ ಬೇಡ ಎಂದು ಸಿಎಂ ಮೇಲೆ ಒತ್ತಡ!
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಭೂಸ್ವಾದೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿರುವಾಗಲೇ ಬಿಎಂಐಸಿಪಿ ಭೂಸ್ವಾಧೀನಾಧಿಕಾರಿ ವರ್ಗಾವಣೆ ಮಾಡದಂತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಸರ್ಕಾರಕ್ಕೆ ಮಾಡಿರುವ ಶಿಫಾರಸು ಭಾರೀ ಚರ್ಚೆಗೆ ಕಾರಣವಾಗಿದೆ.
ಕೆ.ಎ.ಎಸ್.(ಕಿರಿಯ ಶ್ರೇಣಿ) ಅಧಿಕಾರಿಯಾಗಿರುವ ಬಿಎಂಐಸಿಪಿ ಭೂಸ್ವಾಧೀನಾಧಿಕಾರಿ-2, ಬಾಳಪ್ಪ ಹಂದಿಗುಂದ ಅವರನ್ನು ವರ್ಗಾವಣೆ ಮಾಡಬಾರದೆಂದು ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿಗೆ ಹಾಗೂ ಡಿಪಿಎಆರ್ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ..
ಬಾಳಪ್ಪ ಹಂದಿಗುಂದ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯಲ್ಲಿ ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಳಿಸಿ, Foxconn Company ಹಾಗೂ Knowledge Health Innovation and Research (KHIR) ಭೂಮಿಯನ್ನು ಹಸ್ತಾಂತರಿಸಬೇಕಾಗಿರುವುದರಿಂದ, ಸದರಿಯವರ ಸೇವೆಯು ಮಂಡಳಿಗೆ ಅತ್ಯವಶ್ಯವಿರುತ್ತದೆ ಎಂದು ಎಂಬಿ ಪಾಟೀಲ್ ಅವರು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೆ.12ರಂದು ಸಿಆರ್‌ಎಫ್ ದೂರು:
ಭೂಸ್ವಾಧೀನ ಅಕ್ರಮದ ಬಗ್ಗೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸೆಪ್ಟೆಂಬರ್ 12ರಂದು ಮುಖ್ಯಮಂತ್ರಿ, ಕೈಗಾರಿಕಾ ಸಚಿವರು, ಮುಖ್ಯ ಕಾರ್ಯದರ್ಶಿ ಹಾಗೂ ಕೈಗಾರಿಕಾ ಇಲಾಖೆ ಕಾರ್ಯದರ್ಶಿಗೆ ದೂರು ಸಲ್ಲಿಸಿ ಸಂಚಲನ ಸೃಷ್ಟಿಸಿತ್ತು.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) . Office of the Special Land Acquisition Officer- 2, KIADB, (BMICP) and Bangalore Rural ಉಲ್ಲೇಖಿಸಿರುವ Release Order ಪ್ರತಿ ಹಾಗೂ ಪೂರಕ ದಾಖಲೆಗಳನ್ನು ಗಮನಿಸಿದಾಗ ಅರ್ಹರಲ್ಲದವರ ಹೆಸರಿಗೆ ಹಣ ಸಂದಾಯ ನಡೆದಿರುವ ಅನುಮಾನ ವ್ಯಕ್ತವಾಗಿದೆ ಎಂದು ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಈ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ.. ಅಂದು ‘ಜಿಂದಾಲ್’ ಹೊಡೆತಕ್ಕೆ BSY ತಲೆದಂಡ; ಇದೀಗ ಸಿದ್ದು ಗದ್ದುಗೆಗೆ ‘ಮೂಡಾ’ ಕಂಟಕ; CM ಕುಟುಂಬದ ಹಗರಣ ವಿರುದ್ಧ ‘ಸಿಟಿಜನ್ ರೈಟ್ಸ್’ ಸಮರ
ಕುಂದಾಣ ಹೋಬಳಿ ಚಪ್ಪರದಹಳ್ಳಿ ಗ್ರಾಮದಲ್ಲಿ ಸೂ ಸ್ವಾಧೀನಕ್ಕೆ ಜಾಮೀನು ಗುರುತಿಸಲಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಜಮೀನನ್ನು ರೈತರ ಹೆಸರುಗಳಲ್ಲಿ ಗುರುತಿಸಿ ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿ ಈ ದೂರು ಸಲ್ಲಿಕೆಯಾಗಿದ್ದು, ವಿಶೇಷ ಭೂಸ್ವಾಧೀನಾಧಿಕಾರಿ-2 (ಬಿಎಂಐಸಿಪಿ ಮತ್ತು ಬೆಂಗಳೂರು ಗ್ರಾಮಾಂತರ) ಬಾಳಪ್ಪ ಹಂದಿಗುಂದ ಅವರ ಉಪಸ್ಥಿತಿಯಲ್ಲಿ ನಡೆದ ತೀರ್ಮಾನ ಹಾಗೂ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿರುತ್ತದೆ. ಆ ಸಂದರ್ಭದಲ್ಲಿ ಸದರಿ ಜಮೀನು ಸರ್ಕಾರಕ್ಕೆ ಸೇರಿದ್ದೆಂಬ ಬಗ್ಗೆ ಗೊತ್ತಿದ್ದರೂ ಭೂಸ್ವಾಧೀನಾಧಿಕಾರಿಗಳು ಆಕ್ಷೇಪಾರ್ಹ ನಿರ್ಧಾರ ಪ್ರಕಟಿಸಲಾಗಿರುತ್ತದೆ. ಈ ಮೂಲಕ ಕೋಟ್ಯಂತರ ರೂಪಾಯಿ ಸರ್ಕಾರಿ ಹಣ ಹಾಗೂ ಸರ್ಕಾರಿ ಸ್ವತ್ತು ನಷ್ಟವಾಗಿದೆ ಎಂದು ಪಾಲ್ ಆರೋಪಿಸಿದ್ದರು. ಈ ಕೋಟ್ಯಂತರ ರೂಪಾಯಿ ಅವ್ಯವಹಾರದ ಬಗ್ಗೆ ಉಚ್ಚ ನ್ಯಾಯಾಲಯದ ಪರಿವೀಕ್ಷಣೆಯಲ್ಲೇ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕೆಂದು ದೂರಿನಲ್ಲಿ ಕೋರಲಾಗಿತ್ತು.
ಈ ದೂರು ಪರಿಶೀಲನಾ ಹಂತದಲ್ಲಿದ್ದು, ಅದಾಗಲೇ ಈ ಅಧಿಕಾರಿಯ ವರ್ಗಾವಣೆಗೆ ತಯಾರಿ ನಡೆದಿದೆ ಎನ್ನಲಾಗುತ್ತಿದೆ. ಅದಾಗಲೇ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಿಎಂ ಹಾಗೂ ಸಿ.ಆ.ಸು.ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ವರ್ಗಾವಣೆ ಮಾಡದಂತೆ ಒತ್ತಾಯಿಸಿದ್ದಾರೆ. ಈ ಪತ್ರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ.. ಸಿಎಂ ಸಹಿ ಫೋರ್ಜರಿ ಮಾಡಿರೋದು ಈ ಅಧಿಕಾರಿ? ರಾಜ್ಯಪಾಲರಿಗೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ದೂರು