ಮಧ್ಯಪ್ರಾಚ್ಯ ಕದನ; ಗಾಜಾದಲ್ಲಿ ಇಸ್ರೇಲ್ ನಿರಂತರ ವಾಯು ದಾಳಿ

israel palestine clash

ಗಾಜಾ: ಮಧ್ಯಪ್ರಾಚ್ಯಯಾದಲ್ಲಿ ಇಸ್ರೇಲ್-ಪ್ಯಾಲೆಸ್ತೀನ್ ಕದನ ತಾರಕಕ್ಕೇರಿದ್ದು, ಭೀಕರ ಬಾಂಬ್ ದಾಳಿ ಹಲವರನ್ನು ಬಲಿತೆಗೆದುಕೊಂಡಿದೆ.
ಹಮಾಸ್ ಉಗ್ರರ ಜಾಲವನ್ನು ಧ್ವಂಸಗೊಳಿಸಲು ಇಸ್ರೇಲ್ ಸೇನೆ ಗಾಜಾದಲ್ಲಿ ವೈಮಾನಿಕ ದಾಳಿ ತೀವ್ರಗೊಳಿಸಿದೆ.

ಗಾಜಾ ಗಡಿಯೊಳಗೆ ನುಗ್ಗಿರುವ ಇಸ್ರೇಲ್ ಸೇನಾ ಪಡೆ, ನಿರಂತರ ವಾಯುದಾಳಿ ನಡೆಸಿವೆ. ದಾಳಿ ಹಿನ್ನೆಲೆಯಲ್ಲಿ ಭಾರೀ ಸಾವು-ನೋವು ಸಂಭವಿಸಿದ್ದು, ಗಾಜಾದಲ್ಲಿ ಇಂಟರ್ ನೆಟ್ ಹಾಗೂ ಮೊಬೈಲ್ ಸೇವೆ ಸ್ತಬ್ಧವಾಗಿದೆ.

ಗಾಜಾ ಪಟ್ಟಿ ಪ್ರದೇಶಗೊಳಗೆ ಲಗ್ಗೆ ಹಾಕಿರುವ ಇಸ್ರೇಲ್ ಯುದ್ಧ ಟ್ಯಾಂಕರ್ ಗಳು ಹಮಾಸ್ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿವೆ.ಇದೇ ವೇಳೆ, 10ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.

You may have missed