ಗೋ ಮಾಂಸ ಸೇವಿಸುವುದು ಬಿಡುವುದು ಸಿದ್ದರಾಮಯ್ಯರ ವೈಯಕ್ತ ವಿಚಾರ ; ವಿಶ್ವೇಶತೀರ್ಥ

0

ಸಿಎಂ ಸಿದ್ದರಾಮಯ್ಯ ಗೋ ಮಾಂಸ ಸೇವನೆ ಕುರಿತು ಹೇಳಿರುವ ಹೇಳಿಕೆಗೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಗೋ ಮಾಂಸ ಸೇವಿಸುವುದೋ ಬಿಡುವುದು ಅವರ ವೈಯಕ್ತ ವಿಚಾರ. ಆದರೆ, ಒಬ್ಬ ಮುಖ್ಯಮಂತ್ರಿಯಾಗಿ ಗೋ ಮಾಂಸ ಸೇವನೆ ಕುರಿತು ಹೇಳಿಕೆ ನೀಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಲಬುರ್ಗಿಯ ಆಳಂದ ತಾಲ್ಲೂಕಿನ ಧೋತ್ತರಗಾಂವ್ ಗ್ರಾಮದಲ್ಲಿ ಶನಿವಾರ ಮಾತನಾಡಿದ ಪೇಜಾವರ ಮಠಾಧೀಶರು, ಮಸೀದಿಗಳ ಮುಂದೆ ಹಂದಿ ಮಾಂಸ ಸಮಾರಾಧನೆ ಮಾಡಿದರೇ ಸುಮ್ಮನೆ ಇರ್ತಿರಾ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಈ ರೀತಿ ಹೇಳಿಕೆ ನೀಡುವುದರಿಂದ ಹಿಂದೂಗಳ ಮನಸ್ಸಿಗೆ ನೋವಾಗಿದೆ ಎಂದು ಹೇಳಿದರು.

ಇದೇ ವೇಳೆ ಹಿಂದೂ ದೇವರ ಕುರಿತು ವಿವಾದಿತ ಹೇಳಿಕೆ ನೀಡುತ್ತಿರುವ ವಿಚಾರವಾದಿ ಕೆ.ಎಸ್.ಭಗವಾನ್ ವಿರುದ್ಧ ಕಿಡಿಕಾರಿದರು. ಭಗವಾನ್ ಹಿಂದೂ ದೇವರುಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಬೇಕಿದ್ದರೆ, ಬಹಿರಂಗ ಚರ್ಚೆಗೆ ಬನ್ನಿ ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *

You may have missed