sprsha-dubai

 ಮಂಗಳೂರಿನ ಸ್ಪರ್ಶಾ ಶೆಟ್ಟಿಯ ಸಾಧನೆಯ ಹಾದಿ

ಓದುವ ಹವ್ಯಾಸವೊಂದಿದ್ದರೆ ಬದುಕು ಪೂರ್ಣ ಸಂತಸದಿಂದ ಕಳೆಯಬಹುದು ಎಂಬುದು ನಾಣ್ಣುಡಿಸತ್ಯ. ಇದಕ್ಕೆ ಉದಾಹರಣೆಯಾಗಿದ್ದಾಳೆ  “ಓದಿ, ಓದಿಸಿ” ಎಂಬ ಘೋಷವಾಯ್ಕವನ್ನು ಅಕ್ಷರಶಃ ಪಾಲಿಸುತ್ತಿರುವ ಮಂಗಳೂರಿನ ಕುವರಿ ಸ್ಪರ್ಶಾ ಶೆಟ್ಟಿ.

ಈ ಬಾಲೆ, ಕಲಿಕೆಯ ಸಂದರ್ಭದಲ್ಲೇ ಗುರುವಿನ ಸ್ಥಾನದಲ್ಲಿ ನಿಂತಿದ್ದಾಳೆ. ಕಲಿಕೆ ಕೇವಲ ಪಾಠ್ಯಕ್ಕೆ ಸಮೀತವಿರಬಾರದು ಎಂಬ ತಿಳಿದವರ ಮಾತಿಗೆ ಮರುಳಾಗಿರುವ ಈಕೆ ಈಗಿನ್ನೂ ಪ್ರಾರ್ಥಮಿಕ ಶಾಲೆಯಲ್ಲಿ ಕಲಿಯುತ್ತಿರುವವಾಗಲೇ ಓದುವ ಹವ್ಯಾಸದ ಅಭಿಯಾನ ಕೈಗೊಂಡಿದ್ದಾಳೆ.

ಈಕೆ ಈಗಿನ್ನೂ 5ನೇ ತರಗತಿ ವಿದ್ಯಾರ್ಥಿನಿ. ಪ್ರಸ್ತುತ ದುಬೈನ ಇಂಡಿಯನ್ ಹೈಸ್ಕೂಲ್ ನಲ್ಲಿ ಗ್ರೇಡ್ 5 ಅಂದರೆ 5ನೇ ತರಗತಿಯಲ್ಲಿ ಕಲಿಯುತ್ತಿರುವ ಸ್ಪರ್ಶ ಕತೆ ಕಾಂದಬರಿ ವೈಚಾರಿಕತೆಯ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿದ್ದಾಳೆ. ವಿವಿಧ ದೇಶಗಳ ಬದುಕು-ಚಿತ್ರಣಗಳನ್ನು ತಿಳಿಯುವ ಹಸಿವು ಈಕೆಯನ್ನು ಓದುವ ಹವ್ಯಾಸದತ್ತ ತಳ್ಳಿದೆ.

ಈ ಹವ್ಯಾಸ ತನ್ನಲ್ಲಷ್ಟೇ ಹುದುಗಿದ್ದರೆ ಸಾಲದು, ಎಲ್ಲರಲ್ಲೂ ಈ ಹವ್ಯಾಸ ಆವರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈಕೆ ಹೋದಲ್ಲಿ ಬಂದಲ್ಲೇಲ್ಲಾ.  ‘ಓದುವ ಹವ್ಯಾಸದ” ತರಬೇತಿ ಶಿಬಿರ ನಡೆಸುತ್ತಿದ್ದಾಳೆ. ಪಾಠ ಪ್ರವಚನ ನೀಡುತ್ತಾಳೆ ಬೋದನೆ ಹೇಗಿರಬೇಕೆಂಬ ಬಗ್ಗೆ ಈಕೆ ಬೋದಿಸುವುದನ್ನು ಕಂಡು ಶಿಕ್ಷಕರೇ ನಿಬ್ಬೆರಗಾಗಿದ್ದಾರೆ
ದುಬೈನಿಂದ ಹಿಡಿದು ಕರ್ನಾಟಕದವರೆಗೆ “ಓದಿಸೋ, ಟೀಚರ್ ” ಎಂದೇ ಪ್ರಶಂಸೆಗೆ ಗುರಿಯಾಗಿರುವ ಸ್ಪರ್ಶಾ, ದುಬೈನಲ್ಲಿರುವ ಅನಿವಾಸಿ ಭಾರತೀಯ, ಅಪ್ಪಟ್ಟ, ಕನ್ನಡಿಗರಾಗಿರುವ ಮಂಗಳೂರು ಸಮೀಪದ ಪ್ರಕಾಶ್ ಶೆಟ್ಟಿ ಅವರ ಪುತ್ರಿ. ಈಕೆ ಕೆಲದಿನಗಳ ಹಿಂದೆ ಉಡುಪಿ ಹಾಗೂ ದಕ್ಷಿಣ ಕನ್ನಡದ ಹಲವು ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಓದುವ ಅಭಿಯಾನ ಬಗ್ಗೆ ಹೇಳಿಕೊಟ್ಟರು.
ಅದರಲ್ಲೂ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಶ್ರೀ ನಾರಾಯಣ ಗುರು ಇಂಗ್ಲೀಷ್ ಮೀಡಿಯಾ ಸ್ಕೂಲ್ ನಲ್ಲಿ ಕಾರ್ಯಾಗಾರ ರೀತಿಯ ಕಾರ್ಯಕ್ರಮ ನಡೆಸಿ ಗಮನ ಸೆಳೆದರು.

ಓದುವ ವಿಚಾರದಲ್ಲಿನ ಈಕೆಯ ಅಭಿಮತ, ಭೋದನೆ ಬಗೆಗಿನ ಈಕೆಯ ಕೌಶಲ್ಯ ಕಂಡು ಆ ಶಾಲೆಯ ಶಿಕ್ಷಕರೇ ಮೂಕ ವಿಸ್ಮಿತರಾದರು. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವುದು. ವಿಜ್ಞಾನ, ಇತಿಹಾಸದಂತಹ ಲೆಕ್ಕಾಚಾರಗಳನ್ನು. ಆದರೆ ಮಕ್ಕಳಿದ್ದಾಗಲೇ ತಿಳಿಯಬೇಕಾದದ್ದು ಹಲವು ಇದೆ. ಸಾಮಾಜಿಕ ಜವಾಬ್ದಾರಿ ಬಗ್ಗೆ ಅರಿಯಬೇಕಾದ ಅನೇಕ ಸಂಗತಿಗಳಿವೆ.ತಿಳಿವಳಿಕೆಯ ಮಜಲಿನತ್ತ ನಮ್ಮನ್ನು ಕೊಂಡೊಯ್ಯುವುದೇ ಓದುವ ಹವ್ಯಾಸದ ನಡೆ. ಇದನ್ನು ಸೂಚ್ಯವಾಗಿ ಹೇಳಿಕೊಟ್ಟ ಕುಮಾರಿ ಸ್ಪರ್ಶಾ ಶೆಟ್ಟಿ, ನಾಡಿನ ಎಲ್ಲೆಡೆ ಸಾಹಿತ್ಯ ಬಂಡಾರ ಇರಬೇಕಿದ್ದು, ಅದಕ್ಕಾಗಿ ಲೈಬ್ರೇರಿ ಸ್ಥಾಪಿಸಬೇಕೆಂದು ಸಲಹೆ ಮಾಡಿದರು.

ಮನೆಯಲ್ಲೇ ಗ್ರಂಥಾಲಯ

ದುಬೈನಲ್ಲಿರುವ ಇಂಡಿಯನ್ ಹೈಸ್ಕೂಲ್ ನ ಪ್ರತಿಭಾನ್ವಿತೆ ವಿದ್ಯಾರ್ಥಿನಿ ಸ್ಪರ್ಶಾ, ತನ್ನ ಮನೆಯಲ್ಲೇ ಪುಟ್ಟ ಲೈಬ್ರೇರಿಯನ್ನು ಸ್ಥಾಪಿಸಿದ್ದಾಳೆ. ದೇಶವಿದೇಶಗಳ ವಿವಿಧ ಸಾಹಿತ್ಯಗಳ ಭಂಡಾರವಾಗಿ ಈ ಲೈಬ್ರೇರಿ ಆ ಮನೆಗೆ ಭೇಟಿ ನೀಡುವವರ ಕುತೂಹಲದಕೇಂದ್ರ ಬಿಂದುವಾಗಿದೆ. ಈ ಲೈಬ್ರೇರಿಗೆಂದೇ ನಿತ್ಯವೂ ಹತ್ತಾರು ಮಕ್ಕಳು ಭೇಟಿ ನೀಡಿ, ಜ್ಞಾನ ಕೃಷಿಯಲ್ಲಿ ತಲ್ಲೀಣರಾಗುತ್ತಿದ್ದಾರೆ.
ಇದರಿಂದ ಪುಳಕಿತರಾಗಿರುವ ಅನೇಕರು ಈ ಓದುವ ಅಭಿಯಾನದಲ್ಲಿ ಈಕೆ ಜೊತೆ ಕೈಜೋಡಿಸಿದ್ದಾರೆ.ತಾನೇ ಪುಸ್ತಕಗಳನ್ನು ಖರೀದಿಸಿ , ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ಹಂಚಿ ಓದುವ ಹವ್ಯಾಸ ಯಾಕೆ,..? ‘ಓದುವ ಹವ್ಯಾಸ ಹೇಗೆ ‘ ಎಂಬ ಬಗ್ಗೆ ಹೇಳಿಕೊಡುತ್ತಿದ್ದಾಳೆ. ಕನ್ನಡತಿ ಕುವರಿಯ ಈ ಸಾಧನೆ ಪ್ರಶಂಸಾರ್ಹ

Leave a Reply

Your email address will not be published. Required fields are marked *