ಲಂಗ್ಸ್ ಸ್ಪಚ್ಚ ಮಾಡುವುದು ಹೇಗೆ ಗೊತ್ತಾ..?
ದೇಹದ ಪ್ರಮುಖ ಅಂಗಗಳಲ್ಲಿ ಲಂಗ್ಸ್ ಕೂಡ ಒಂದು. ಆದರೆ ನಾವು ಸೇವಿಸುವ ಆಹಾರ, ಪಾನೀಯಗಳು ಅಥವ ಇನ್ನಿತರ ಕಾರಣಗಳಿಂದ ವಿಷಕಾರಕ ಅಂಶಗಳು ದೇಹವನ್ನು ಸೇರುವುದರಿಂದ ಟಾಕ್ಸಿನ್ ಗಳು ದೇಹದ ರಕ್ತನಾಳಗಳಲ್ಲಿ ಸೇರಿಕೊಂಡು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ದೂಮಪಾನಿಗಳಲ್ಲಿ ಇದು ಕೊಂಚ ಹೆಚ್ಚೆಂದೆ ಹೇಳಬಹುದು. ಆದರೆ ಈ ರೀತಿ ಶ್ವಾಶಕೋಶಗಳಲ್ಲಿ ಸೇರಿಕೊಂಡಿರುವ ವಿಷಕಾರಕ ಅಂಶಗಳನ್ನು ತೆಗೆಯಲು ಸಾಧ್ಯ.
ಶ್ವಾಶಕೋಶ ಸ್ಪಚ್ಚತಾ ಕಾರ್ಯ ಆರಂಭಿಸುವ ಎರಡು ದಿನಗಳ ಮುಂಚೆ ನಾವು ಎಲ್ಲಾ ರೀತಿಯ ಡೈರಿ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲವಾದಲ್ಲಿ ಈ ಹಾಲಿನ ಉತ್ಪನ್ನಗಳು ಟಾಕ್ಸಿನ್ ಹೊರಹಾಕುವ ಕಾರ್ಯವನ್ನು ಹೊರಹಾಕುವ ಕಾರ್ಯವನ್ನು ನಿಧಾನಗೊಳಿಸುತ್ತದೆ.
ಮೊದಲ ದಿನ
ರಾತ್ರಿ ಮಲಗುವ ಮೊದಲು ಒಂದು ಕಪ್ ಟೀ ಕುಡಿಯಿರಿ. ಇದರಿಂದ ಕರಳಿನ ಕ್ರಿಯೆ ಸುಲಭವಾಗುತ್ತದೆ ಹಾಗೂ ಮಲಬದ್ದತೆ ನಿವಾರಣೆಯಾಗುತ್ತದೆ.
ಎರಡನೇ ದಿನ
ಎರಡನೇ ದಿನ ಬೆಳಗ್ಗಿನ ಉಪಹಾರ ಸೇವನೆ ಮುಂಚಿತವಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆಹಣ್ಣಿನ ರಸವನ್ನು ಸೇವಿಸಿ. 300 ಎಂಎಲ್ ನೀರಿಗೆ 2 ಲಿಂಬೆಹಣ್ಣನ್ನು ಬಳಸಿಕೊಳ್ಳಿ.
ಇದಾದ ಬಳಿಕ 300 ಎಂಎಲ್ ನಷ್ಟು ದ್ರಾಕ್ಷಿರಸವನ್ನುಕುಡಿಯಿರಿ.
ಹಣ್ಣಿನ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಲಂಗ್ಸ್ ಹಾಗೂ ರೆಸ್ಪಿರೇಟರಿ ಸಿಸ್ಟಮ್ ಗಳನ್ನು ಸ್ಪಚ್ಚಗೊಳಿಸಿ, ಅವುಗಳ ಕಾರ್ಯವನ್ನು ಸುಲಭಗೊಳಿಸುತ್ತದೆ.
ಬಳಿಕ ಬೆಳಗ್ಗಿನ ಉಪಹಾರ ಮತ್ತು ಮದ್ಯಾಹ್ನಾದ ಊಟದ ನಡವೆ 300 ಎಂಎಲ್ ನಷ್ಟು ಪ್ರಮಾಣದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಇದರಿಂದ ರಕ್ತ ಶುದ್ದೀಕರಣಗೊಳ್ಳುತ್ತದೆ. ಇದು 2 ದಿನಗಳ ಕಾರ್ಯವನ್ನು ಸಫಲಗೊಳಿಸುತ್ತದೆ. ಊಟದ ಸಮಯದಲ್ಲಿ ಮತ್ತೆ 400 ಎಂಎಲ್ ನಷ್ಟು ಕ್ಯಾರೆಟ್ ಜ್ಯೂಸಿ ಕುಡಿಯಿರಿ.
ಮೂರನೇ ದಿನ
ರಾತ್ರಿ ಮಲಗುವ ಮುಂಚೆ 300 ಎಂಎಲ್ ನಷ್ಟು 100% ಕ್ರೇನ್ ಬರಿ ಜ್ಯೂಸ್ ಕುಡಿಯಿರಿ. ಇದರ ಸೇವನೆಯಿಂದ ಲಂಗ್ಸ್ ನಲ್ಲಿರುವ ಬ್ಯಾಕ್ಟಿರಿಯಾಗಳು ಕಡಿಮೆಯಾಗುತ್ತದೆ.
ಅಷ್ಟೇ ಅಲ್ಲದ ಈ ಸಮಯದಲ್ಲಿ ಮೂರು ದಿನವೂ ಬಿಸಿ ನೀರಿನ ಸ್ನಾನವನ್ನೇ ಮಾಡಬೇಕು. ಬೆವರುವುದರಿಂದ ದೇಹ ಸ್ಪಚ್ಚವಾಗುತ್ತದೆ. ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಕೆಫಿನ್ ಹಾಗೂ ಸ್ಮೋಕ್ ಮಾಡುವಂತಿಲ್ಲ.