ಮುಖದಂತೆ ಥಳಥಳ ಹೊಳೆಯುವ ಕೈ-ಕಾಲು ಪಡೆಯುವುದು ಹೇಗೆ ಗೋತ್ತಾ…

0

ಮುಖದ ಸೌಂದರ್ಯಕ್ಕೆ ಕೊಡುವಷ್ಟು ಮಹತ್ವವನ್ನು ಕೆಲವರು ಕೈ ಹಾಗೂ ಕಾಲಿಗೆ ಕೊಡುವುದಿಲ್ಲ. ಹೀಗಾಗಿಯೇ ಕೆಲವರು ಎಷ್ಟು ಸುಂದರವಾಗಿ ಕಾಣಿಸಿದರು ಅವರ ಕೈ ಮತ್ತು ಕಾಲುಗಳು ಇತರರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತದೆ.

  • ನಿಮಗೊತ್ತ ಪುರುಷರು ಮಹಿಳೆಯರ ಮುಖ ನೋಡುವ ಮುಂಚೆ ಕೈ ಮತ್ತು ಕಾಲುಗಳನ್ನು ಗಮನಿಸುತ್ತಾರಂತೆ. ಮಹಿಳೆಯರ ಶಿಸ್ತು ಹಾಗೂ ಸೌಂದರ್ಯ ಕಾಳಜಿ ಅವರ ಕೈಕಾಲುಗಳಲ್ಲೇ ವ್ಯಕ್ತವಾಗುತ್ತದಂತೆ. ಇದೇನೆ ಇರಲಿ ಕೈಕಾಲು ಕಪ್ಪಗಾಗಿ ಬೇಸರಗೊಂಡಿದ್ದೀರಾ. ಹಾಗದರೆ ಇಲ್ಲಿದೆ ಸುಲಭ ಪರಿಹಾರ. ನೀವು ಮಾಡಬೇಕಾಗಿದ್ದು ಇಷ್ಟೇ.
    ನಿಂಬೆಹಣ್ಣು ಮತ್ತು ಉಪ್ಪು- ಮೊದಲು ಕೈ ಮತ್ತು ಕಾಲುಗಳಿಗೆ ಉಪ್ಪನ್ನು ಚದುರಿಸಿಕೊಳ್ಳಿ ಬಳಿಕ ನಿಂಬೆಹಣ್ಣಿನಿಂದ ಅವುಗಳನ್ನು ನಿಧಾನವಾಗಿ ತಿಕ್ಕಿ. ಹೀಗೆ ಮಾಡುವುದರಿಂದ ಡೆಡ್ ಸ್ಕೀನ್ ಗಳು ಮಾಯವಾಗಿ ನಿಮ್ಮ ಕೈಕಾಲುಗಳು ಬೆಳ್ಳಗಾಗುತ್ತದೆ.
  • ಹಸಿ ಹಾಲು- ಹಸಿಹಾಲನ್ನು ಕೈಕಾಲುಗಳಿಗೆ ತಿಕ್ಕಿ ಮಸಾದ್ ಮಾಡುವುದರಿಂದಲೂ ಟ್ಯಾನ್ ಸಮಸ್ಯೆಯಿಂದ ದೂರವಾಗಬಹುದು. ಇದರಿಂದ ತ್ವಜೆ ಬೆಳ್ಳಗಾಗುತ್ತದೆ.
  • ಹಾಲು ಮತ್ತುಒಣಗಿದ ಕಿತ್ತಾಳೆ ಹಣ್ಣಿನ ಸಿಪ್ಪೆ- ಕಿತ್ತಾಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅವುಗಳನ್ನು ಪೌಡರ್ ಆಗಿ ಪರಿವರ್ತಿಸಿಕೊಳ್ಳಿ. ಬಳಿಕ ಇದಕ್ಕೆ ಕೊಂಚ ಹಾಲು ಹಾಕಿ ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಮುಖ, ಕಾಲು ಹಾಗೂ ಕೈಗಳಿಗೆ ಹಚ್ಚಿ 20 ನಿಮಿಷಗಳ ನಂತರ ಉಗುರು ಬೆಚ್ಚಗೆ ನೀರಿನಿಂದ ತೊಳೆಯಿರಿ. ಫಲಿತಾಂಶ ನಿಮಗೆ ಅಚ್ಚರಿ ತರುವುದು ಗ್ಯಾರಂಟಿ
    ಸೌತೆಕಾಯಿ ಹಾಗೂ ಅಲೋವೇರಾ. ಅಲೋವೆರಾ ಜೆಲ್ ಅಥವ ಸೌತೆಕಾಯಿ ರಸವನ್ನು ಟ್ಯಾನ್ ಆಗಿರುವ ಭಾಗಕ್ಕೆ ಹಚ್ಚಿ ಮಸಾದ್ ಮಾಡುವುದರಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು..

Leave a Reply

Your email address will not be published. Required fields are marked *

You may have missed