ಬಸ್ಸೇ ಸ್ತ್ರೀ ಶೌಚಾಲಯ; ಇದು ಕೆಎಸ್ಸಾರ್ಟಿಸಿ ಟಾಯ್ಲೆಟ್ ಕಥೆ
ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯು ಅನುಪಯುಕ್ತ ಬಸ್ಸನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ಸುಸಜ್ಜಿತ ಸ್ತ್ರೀ ಶೌಚಾಲಯ ನಾಡಿನ ಗಮನಸೆಳೆದಿದೆ. ಈ ಸ್ತ್ರೀ ಶೌಚಾಲಯವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಲೋಕಾರ್ಪಣೆ ಮಾಡಿದ್ದಾರೆ.
ಈ ಶೌಚಾಲಯ ಹಲವು ವಿಶೇಷತೆಗಳಿಂದ ಗಮನಸೆಳೆದಿವೆ. ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಾತ್ಯ ಶೌಚಾಲಯಗಳು, ವಾಷ್ ಬೇಸಿನ್ ಗಳು, ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ.
ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ ಬಸ್ಸಿನಲ್ಲಿ ನಿರ್ಮಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.