ಕೃಷ್ಣೆ ಗಂಗಾವತರಣಿಯಾಗಿದ್ದಾಳೆ ; ಇದು ಪ್ರಕೃತಿಯ ಅಚ್ಚರಿ
ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉದ್ಭವಿಸಿ ಕರ್ನಾಟಕ, ಆಂಧ್ರ ರಾಜ್ಯಗಳಲ್ಲಿ ಹರಿಯುವ ಕೃಷ್ಣೆ ಉತ್ತರದ ಗಂಗೆಯಷ್ಟೇ ಪೂಜನೀಯಳು. ಈ ನದಿಯಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ವಿಚಿತ್ರವೊಂದು ಜರುಗಲಿದೆ. ನಮ್ಮ ರಾಜ್ಯದಲ್ಲಿ ಹರಿಯುವ ಕೃಷ್ಣೆ ಗಂಗೆಯಾಗಿ ಅವತರಿಸಲಿದ್ದಾಳೆ. ಒಂದು ವರ್ಷದ ಮಟ್ಟಿಗೆ ಗಂಗೆಯಾಗಿ ಪರಿವರ್ತನೆಯಾಗಿದ್ದಾಳೆ. ಈ ಪರಿವರ್ತನೆ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಈ ವೇಳೆ ನದಿನೀರಿನ ಬಣ್ಣ ಬದಲಾಗುವುದೇ ಇಲ್ಲಿನ ವಿಸ್ಮಯ.
ಕನ್ಯಾ ರಾಶಿಯಲ್ಲಿ ಗುರು ಬಂದಾಗ ಈ ಶುಭ ಮುಹೂರ್ತದಲ್ಲಿ ಕೃಷ್ಣೆ ಗಂಗೆಯಾಗಿ ಪರಿವರ್ತಿತಳಾಗುತ್ತಾಳೆ. ಕೃಷ್ಣೆ ಸಾಮಾನ್ಯವಾಗಿ ಇರೋದು ಕಪ್ಪಾಗಿ, ಆದರೆ ಈ ಬದಲಾವಣೆ ವೇಳೆ ನೀಲಿ ಬಣ್ಣಕ್ಕೆ ತಿರುಗುತ್ತಾಳೆ.
ಈ ವೇಳೆ ಪುಣ್ಯ ಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳ ಜನರ ದಾಹ ತಣಿಸುವವಳು ಇದೇ ಕೃಷ್ಣೆ. ಹಾಗಾಗಿ ಈ ಜಿಲ್ಲೆಗಳಲ್ಲಿ ರೈತಾಪಿ ಜನ ಪುಣ್ಯ ಸ್ನಾನ ಮಾಡಿದರು
ಈ ಗಂಗಾವತರಣ ವೇಳೆ ಕುಂಭಮೇಳ ನಡೆಸಬೇಕು. ಆದರೆ ಕುಂಭಮೇಳ ನಡೆಸಿದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. 70 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರು ಕುಂಭಮೇಳ ನಡೆಸಿದ್ದರು. ಬಳಿಕ ಅವರ ಪದವಿಯೇ ಹೋಯಿತು. ಅನಂತರ ಸರ್ಕಾರದ ಕಡೆಯಿಂದ ಕುಂಭ ಮೇಳ ನಡೆದಿಲ್ಲ. ಇದು ಜನರ ಆಚರಣೆಯಾಗಿ ಸಾಗಿದೆ