KSRTCಗೆ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ‘Governance now 11th PSU ರಾಷ್ಟ್ರೀಯ ಪ್ರಶಸ್ತಿ’ ಮತ್ತು ‘PSU ನಾಯಕತ್ವ ಪ್ರಶಸ್ತಿ -2025’

0
AWARD to KSRTC MD V. Anbukumar IAS

ನವದೆಹಲಿ: ದೇಶದಲ್ಲೇ ಅತ್ಯುತ್ತಮ ಸಾರಿಗೆ ಸೇವೆ ಮೂಲಕ ಜನಪ್ರಿಯತೆ ಗಳಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ‘Governance now 11th PSU ರಾಷ್ಟ್ರೀಯ ಪ್ರಶಸ್ತಿ’ ಮತ್ತು ‘PSU ನಾಯಕತ್ವ ಪ್ರಶಸ್ತಿ -2025’ ಯನ್ನು KSRTC ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಸ್ವೀಕರಿಸಿದ್ದಾರೆ.

‘Governance Now’ ರವರು ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ PSU ಆತ್ಮ‌ನಿರ್ಭರ್ ನಾಯಕತ್ವ ಪ್ರಶಸ್ತಿಯನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವ ಸತೀಶ್ ಚಂದ್ರ ದುಬೆ ಮತ್ತು ಮಾಜಿ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಅವರು ಪ್ರದಾನ‌ ಮಾಡಿದರು.

KSRTC ನಿಗಮದಲ್ಲಿ 1314 ಬಸ್ಸುಗಳು ಪುನಶ್ಚೇತನಗೊಂಡಿದ್ದು, ಕರ್ನಾಟಕ ಸಾರಿಗೆ 1184 , ನಗರ ಸಾರಿಗೆ 115, ಐರಾವತ ಕ್ಲಬ್ ಕ್ಲಾಸ್ 15 ಬಸ್ಸುಗಳನ್ನು ಸಹ ಪುನಶ್ಚೇತನಗೊಳಿಸಲಾಗಿದೆ. ಈ ಮೂಲಕ ರೂ.250 ಕೋಟಿಗೂ ಹೆಚ್ಚು ಹಣ ನಿಗಮಕ್ಕೆ ಉಳಿತಾಯವಾಗಿದ್ದು, ಈ ಉಪಕ್ರಮವು ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿ ಸ್ವಾವಲಂಬನೆಯನ್ನು ಉತ್ತೇಜಿಸುವ ಯೋಜನೆಯು ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ KSRTC ಉಪಮುಖ್ಯ ಯಾಂತ್ರಿಕ ಅಭಿಯಂತರ ಬಿ.ಎಸ್.ನಾಗರಾಜ ಮೂರ್ತಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You may have missed