ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ‘ನ್ಯಾಕ್’ ಕಿರೀಟ..! ‘ಎ’ ಗ್ರೇಡ್ ಮಾನ್ಯತೆ

0
KSLU VC Basavaraju-NAAC team VISIT

ಹುಬ್ಬಳ್ಳಿ : ರಾಜ್ಯದ ವಿಶ್ವವಿದ್ಯಾಲಯ ‘KSLU’ ಪ್ರತಿಷ್ಠೆ ಮತ್ತಷ್ಟು ಹೆಚ್ಚಿದೆ. ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಅಭಿವೃದ್ಧಿಗೆ ಫುಲ್ ಮಾರ್ಕ್ಸ್ ನೀಡಿರುವ ನ್ಯಾಕ್‌ ತಂಡ ‘ಎ’ ಗ್ರೇಡ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ನ್ಯಾಕ್‌ ನಿಂದ ‘ಎ’ ಗ್ರೇಡ್ ದೊರೆತಿದ್ದು, ವಿಶ್ವವಿದ್ಯಾಲಯದ ಹೆಮ್ಮೆ ಹೆಚ್ಚಿಸಿದೆ ಎಂನು ಶಿಕ್ಷಣ ತಜ್ಞರು ಸಂತಸ ಹಂಚಿಕೊಂಡಿದ್ದಾರೆ.

ಕಳೆದ 15 ವರ್ಷಗಳಿಂದ ವಿವಿಯು ಕಾನೂನು ಮೌಲ್ಯಾಧಾರಿತ ಶಿಕ್ಷಣವನ್ನು ಒದಗಿಸುತ್ತಿದ್ದು, 128 ಸಂಯೋಜಿತ ಕಾನೂನು ಕಾಲೇಜುಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಈ ವಿಶ್ವವಿದ್ಯಾಲಯಕ್ಕೆ ಮೇ ತಿಂಗಳಲ್ಲಿ ನ್ಯಾಕ್ ಪೀರ್ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಅಧ್ಯಕ್ಷೆ ಡಾ. ನಿಶಿತಾ ಜಾಲ, ಡಾ.ಕೆ. ಜಯಚಂದ್ರ ರೆಡ್ಡಿ, ಡಾ. ಜಯಶಂಕರ ಕೆ. ಐ., ಡಾ. ಸುಭೀರ್ ಕುಮಾರ ರಾಯ್, ಡಾ. ಧರಮೇಂದ್ರ ಕುಮಾರ ಮಿಶ್ರಾ, ಡಾ. ತೆನುಮೋಜಿ ರಾಮಾನುಜಂ ಮತ್ತು ಡಾ. ಜಗನ್ನಾಥ ಪಾಟೀಲ ಅವರನ್ನೊಳಗೊಂಡ ತಂಡವು ಹೈಬ್ರಿಡ್ ಮೋಡ್‌ನಲ್ಲಿ, ಅಂದರೆ ಡಾ. ಕೆ. ಜಯಚಂದ್ರ ರೆಡ್ಡಿ ಹಾಗೂ ಡಾ. ಸುಭೀರ್ ಕುಮಾರ ರಾಯ್ ಆಫ್‌ಲೈನ್ ಮತ್ತು ಇನ್ನುಳಿದ ಎಲ್ಲಾ ಸದ್ಯಸರು ಆನ್‌ಲೈನ್ ವಿಧಾನದಲ್ಲಿ ಪರಿಶೀಲನೆ ನಡೆಸಿದೆ.

KSLU ಕುಲಪತಿ ಡಾ.ಬಸವರಾಜ್ ನೇತೃತ್ವದಲ್ಲಿ ವಿಶ್ವವಿದ್ಯಾಲಯ ಹೊಂದಿರುವ ಸುಸಜ್ಜಿತ ಕ್ಯಾಂಪಸ್ ಬಗ್ಗೆ ನ್ಯಾಕ್ ತಂಡ ತೃಪ್ತಿ ವ್ಯಕ್ತಪಡಿಸಿದೆ. ಕೋರ್ಸುಗಳು, ತರಗತಿಗಳು, ಪ್ರವೇಶಾತಿ, ಪರೀಕ್ಷಾ ವಿಧಾನ, ವಿದ್ಯಾರ್ಥಿಗಳ ಫಲಿತಾಂಶ, ಮೌಲ್ಯಮಾಪನ, ಸಂಶೋಧನ ಚಟುವಟಿಕೆಗಳು, ಕ್ರೀಡೆ, ಬೋಧನ ವ್ಯವಸ್ಥೆ, ಇತರ ಪಠ್ಯೇತರ ಚಟುವಟಿಕೆಗಳು ಮತ್ತು ವಿಶ್ವವಿದ್ಯಾಲಯದ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಶೀಲಿಸಿ ಮತ್ತು ಮೌಲ್ವಿಕರಿಸಿ ವಿಶ್ವವಿದ್ಯಾಲಯದ ವರದಿಯನ್ನು ನ್ಯಾಕ್ ಸಂಸ್ಥೆ ಪುರಸ್ಕರಿಸಿದೆ.

ಕುಲಪತಿ ಸ್ವಾಗತ:

ಇದೀಗ ನ್ಯಾಕ್‌ನಿಂದ ವಿಶ್ವವಿದ್ಯಾಲಯಕ್ಕೆ ‘ಎ’ ಗ್ರೇಡ್ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ KSLU ಕುಲಪತಿ ಡಾ.ಬಸವರಾಜು, ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರೇಡ್‌ನ್ನು ಪಡೆಯಲು ಶ್ರಮಿಸುವುದಾಗಿ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಗಿರುವ ಅಡಚಣೆಯಿಂದಾಗಿ ಶೆಕ್ಷಣಿಕ ವರ್ಷ ನಿಗದಿಯಲ್ಲಿ ಆಗಿರುವ ಲೋಪವನ್ನು ಸರಿಪಡಿಸಲಾಗುತ್ತಿದ್ದು, ಶಿಕ್ಷಣ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಪರಿವರ್ತನೆ ಮಾಡಲಾಗಿದೆ. ಸರ್ಕಾರದ ಮಾರ್ಗದರ್ಶನದಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲೂ ಸುಧಾರಣೆ ತರಲಾಗುತ್ತಿದೆ ಎಂದು ಕುಲಪತಿ ಪ್ರೊ.ಬಸವರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *