ಕರ್ನಾಟಕದ ಮೇಲೂ ‘ಮಿಂಚಾಂಗ್’ ಪರಿಣಾಮ; ಭಾರೀ ಮಳೆ ಸಾಧ್ಯತೆ, ಮೈ ಕೊರೆವ ಚಳಿ
ಬೆಂಗಳೂರು: ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಮಿಂಚಾಂಗ್ ಚಂಡ ಮಾರುತದ ರೌದ್ರ ರೂಪ ಭೀತಿಯನ್ನು ಸೃಷ್ಟಿಸಿದೆ. ಇದೇ ವೇಳೆ, ಕರ್ನಾಟಕದ ಮೇಲೂ ಈ ಮಿಂಚಾಂಗ್ ಚಂಡ ಮಾರುತ ಪರಿಣಾಮ ಬೀರಲಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಮಿಚಾಂಗ್ ಚಂಡ ಮಾರುತದ ಪರಿಣಾಮ ಕರ್ನಾಟಕದ ಬಹುಭಾಗ ಮೋಡವನ್ನು ಆವರಿಸಿಕೊಂಡಿದೆ. ಇದರ ಪರಿಣಾಮವಾಗಿ ಭಾರೀ ಮಳೆಯಾಗಲಿದೆ. ಜೊತೆಗೆ ಚಳಿಯ ವಾತಾವರಣ ಸೃಷ್ಟಿಯಾಗಿದೆ.