‘ಕರ್ನಾಟಕವೇ ಹೆಸರು, ಕನ್ನಡವೇ ಉಸಿರು’: KSRTCಯಲ್ಲಿ ‘ರಾಜ್ಯೋತ್ಸವ ರಂಗು’ ಹೀಗಿದೆ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಬಂತೆಂದರೆ ಸಾಕು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ:(KSRTC) ಪಾಳಯದಲ್ಲಿ ಎಲ್ಲಿಲ್ಲದ ಸಡಗರ. ಕನ್ನಡಾಂಬೆಯ ಉತ್ಸವದಿಂದಾಗಿ ಕೆಎಸ್ಸಾರ್ಟಿಸಿ ಬಳಗದಲ್ಲಿ ಎಲ್ಲಿಲ್ಲದ ಸಡಗರ. ಅದರಲ್ಲೂ ಬೆಂಗಳೂರಿನಲ್ಲಿರುವ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ರಾಜ್ಯೋತ್ಸವ ಆಚರಣೆ ನಾಡಿನ ಗಮನಸೆಳೆಯಿತು.
‘ಕರ್ನಾಟಕ ಸಂಭ್ರಮ–50’ (ಹೆಸರಾಯಿತು ಕರ್ನಾಟಕ – ಉಸಿರಾಗಲೀ ಕನ್ನಡ) ಘೋಷಣೆಯೊಂದಿಗೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಗೀತ ಗಾಯನ ಕಾರ್ಯಕ್ರಮ ಈ ಬಾರಿಯ ಕನ್ನಡ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು. ತಾಯಿ ಭುವನೇಶ್ವರಿ ದೇವಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.
ಕಾರ್ಯಕ್ರಮವನ್ನು ನಿಗಮದ ಎಲ್ಲಾ ಘಟಕಗಳು, ವಿಭಾಗಗಳು, ಕಾರ್ಯಾಗಾರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕರಾದ ಡಾ.ನಂದಿನಿದೇವಿ ಕೆ ಹಾಗೂ ಕೇಂದ್ರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದರು.