ಹಳೇ ಪ್ರಕರಣದ ಸೇಡು ; ನಿವೃತ್ತ ನ್ಯಾಯಮೂರ್ತಿ ಮನೆ ದರೋಡೆ
ದರೋಡೆ ಮಾಡುವುದಕ್ಕೆ ಕಳ್ಳರಿಗೆ ಇಂತಹ ಏರಿಯಾ, ಇಂತಹುದೆ ಮನೆಯೆಂಬುದಿಲ್ಲವಾದರೂ ಪೊಲೀಸರ, ನ್ಯಾಯಾಧೀಶರ ಮನೆಯಲ್ಲಿ ಕಳ್ಳತನವೆಸಗಲು ಕೊಂಚವಾದರೂ ಹೆದರುತ್ತಾರೆ. ಆದರೆ ಸುಮಾರು 10 ಜನರಿದ್ದ ಡಕಾಯಿತರ ಗುಂಪು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಪಟ್ಟಸೋಮನಹಳ್ಳಿಯಲ್ಲಿ ವಾಸವಿದ್ದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವಪ್ಪ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿದೆ.
ಮೊದಲಿಗೆ ಗ್ರಾಮದ ದೇವಾಲಯಕ್ಕೆ ನುಗ್ಗಿ ದೇವರ ಚಿನ್ನಾಭರಣ ದೋಚಿದ ದರೋಡೆಕೋರು, ಅಲ್ಲಿಂದ ನಿವೃತ್ತ ನ್ಯಾಯಮೂರ್ತಿ ವಾಸವಾಗಿದ್ದ ತೋಟದ ಮನೆಗೆ ನುಗ್ಗಿದ್ದಾರೆ. ಹಳೇ ಪ್ರಕರಣದ ಹೆಸರು ಪ್ರಸ್ತಾಪಿಸಿ, ನಿಮ್ಮಿಂದ ನಾವು ಶಿಕ್ಷೆ ಅನುಭವಿಸುವಂತಾಗಿದೆ. ಮಗಳ ಮದುವೆಗೆ ಹಣ ಹೊಂದಿಸಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ಪರವಾಗಿ ತೀರ್ಪು ನೀಡಿದ್ದಿದ್ರೆ ಮಗಳ ಮದ್ವೆಯನ್ನು ಮಾಡಬಹುದಿತ್ತು. ಆದ್ರೆ ಮದ್ವೆ ಮಾಡಲು ಹಣವಿಲ್ಲದ ಕಾರಣ ದರೋಡೆ ಮಾಡುತ್ತಿರುವುದಾಗಿ ಹೇಳಿ, ಹಗ್ಗದಿಂದ ಕಟ್ಟಿಹಾಕಿ ದರೋಡೆ ಮಾಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಶಿವಪ್ಪ ದಂಪತಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪಡೆಯುತಿದ್ದಾರೆ.
ದರೋಡೆ ವಿಚಾರ ತಿಳಿಯುತಿದ್ದಂತೆ ಎಎಸ್ ಪಿ ಸೇರಿದಂತೆ ಪಾಂಡವಪುರ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ನ್ಯಾಯಾಧೀಶರ ಮನೆಯಿಂದ ಸುಮಾರು ಒಂದು ಲಕ್ಷ ರೂಪಾಯಿ ನಗದು, ಸಮೀಪವೇ ಇರುವ ದೇವಾಸ್ಥಾನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಅಲ್ಲದೆ ಮತ್ತೊಂದು ಮನೆ ಬಾಗಿಲು ಮುರಿಯಲು ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ.