ಮತ್ತೆ ಜೀವತಳೆಯಲಿದೆ ಜಟಾಯು
ಜಟಾಯು… ರಾಮಾಯಣ ತಿಳಿದವರು ಈ ಹೆಸರನ್ನು ಮರೆಯಲು ಸಾದ್ಯವೇ ಇಲ್ಲ. ರಾಮಾಯಣದಲ್ಲಿ ರಾಮನ ಮಡದಿ ಸೀತೆಯನ್ನು ರಾವಣ ಅಪಹರಿಸಿ ಪುಷ್ಪಕ ವಿಮಾನದಲ್ಲಿರಿಸಿ ಲಂಕೆಗೆ ಒಯ್ಯುತ್ತಿದ್ದಾಗ ವಾಯುಮಾರ್ಗದಲ್ಲಿ ಅಡ್ಡ ಗಟ್ಟಿ ಹೋರಾಡಿ ಸಾವನ್ನಪ್ಪಿದ ಪಕ್ಷಿ ಜಟಾಯು. ಈ ಪೌರಾಣಿಕ ಪಕ್ಷಿ ಇದೀಗ ಮತ್ತೆ ಜೀವತಳೆದಿದೆ. ಕೇರಳದ ಪ್ರವಾಸೋದ್ಯಮ ಇಲಾಖೆ ಸರ್ಕಾರ ಜಟಾಯು ಪ್ರಕೃತಿ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿದೆ.
ಕೊಟ್ಟಾಯಂ ಜಿಲ್ಲೆ ತಲೆ ಎತ್ತಲಿರುವ ಈ ಬೃಹತ್ ಉದ್ಯಾನವನ 65 ಎಕರೆ ವಿಸ್ತಿರ್ಣದಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆಯಂತೆ. ಈ ಪಾರ್ಕ್‌ನಲ್ಲಿ ನೈಸರ್ಗಿಕ ವೈಷಿಷ್ಯತೆಗಳಾದ ಸಣ್ಣ ಪರ್ವತಗಳು ,ಕಣಿವೆಗಳು ಮತ್ತು ಬೃಹತ್‌ಬಂಡೆಗಳ ರಚನೆಗಳು ಒಳಗೊಂಡಿದ್ದು, 2016ರ ಜನವರಿಯಲ್ಲಿ ಪಾರ್ಕ್‌ನಮೊದಲ ಹಂತ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ.
ಶಿಲ್ಪಕಲಾಕೃತಿಯ ಒಳಭಾಗದಲ್ಲಿ 6ಡಿ ಚಿತ್ರಮಂದಿರ ಮತ್ತು ಆಡಿಯೋ ವಿಡಿಯೋ ಆಧಾರಿತ ಡಿಜಿಟಲ್‌ಮ್ಯೂಸಿಯಂ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳಲಿದೆ. ರಾಮಾಯಣದ ಪ್ರಸಂಗವನ್ನು ಪ್ರವಾಸಿಗರ ಮುಂದೆ ಇಲ್ಲಿ ಸಾದರ ಪಡಿಸಲಾಗುತ್ತದೆ. ಪಕ್ಷಿಯ ಆತ್ಯಾಕರ್ಷಕ ದೈತ್ಯ ಪ್ರತಿಮೆ ಇಲ್ಲಿನ ಆಕರ್ಷಣೆಯ ಕೇಂದ್ರಬಿಂದುವಾಗಿದೆ..