ಗಾಜಾ ಕದನ: ಇಸ್ರೇಲ್ ನೆರವಿಗೆ ಧಾವಿಸಿದ ಅಮೆರಿಕಾ; ಯುದ್ಧ ನೌಕೆಗಳ ರವಾನೆ
ಗಾಜಾ: ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮರದಿಂದಾಗಿ ಗಾಜಾ ಪಟ್ಟಿ ಪ್ರಕ್ಷುಬ್ಧಗೊಂಡಿದೆ. ಗಾಜಾ ಪಟ್ಟಿ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಸಾವಿರಕ್ಕೆ ಏರಿಕೆಯಾಗಿದೆ. ಇದೇ ವೇಳೆ ಉಗ್ರರ ನಡೆ ಬಗ್ಗೆ ಕುಪಿತವಾಗಿರುವ ಅಮೆರಿಕಾ ರಾಷ್ಟ್ರವು ಇಸ್ರೇಲ್’ನ ನೆರವಿಗೆ ಧಾವಿಸಿದ್ದು ಸಮರ ನೌಕೆಗಳನ್ನು ಕಳುಹಿಸಿಕೊಟ್ಟಿದೆ.
ಗಾಜಾ ಪಟ್ಟಿ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಹಲವು ಸೈನಿಕರು ಮತ್ತು ಪೊಲೀಸರು ಸೇರಿದಂತೆ 2,000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಇದೀಗ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ಅಮೆರಿಕವು ಇಸ್ರೇಲ್ ಸೈನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಯುದ್ಧ ನೌಕೆಯನ್ನು ಕಳುಹಿಸಿದೆ. ಮೆಡಿಟರೇನಿಯನ್ ಸಮುದ್ರಕ್ಕೆ ಯುದ್ಧ ಹಡಗುಗಳನ್ನು ಕಳುಹಿಸಿದೆ.