ಇಸ್ರೇಲ್-ಪ್ಯಾಲೆಸ್ತೀನ್ ಸಮರ; ಯಹೂದಿಗಳ ಶತ್ರು ರಾಷ್ಟ್ರ ಇರಾನ್ ಸಂಭ್ರಮಾಚರಣೆ

ಗಾಜಾಪಟ್ಟಿ ಮತ್ತೊಮ್ಮೆ ಉದ್ವಿಗ್ನಗೊಂಡಿದ್ದು ಹಮಾಸ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿರುವ ಪ್ರತಿಕಾರ್ಯಾಚರಣೆಯಲ್ಲಿ ಪ್ಯಾಲೆಸ್ತೀನ್ ತತ್ತರಗೊಂಡಿದೆ. ಶನಿವಾರದಿಂದ ಇಸ್ರೇಲ್ ಸತತ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ, ಪ್ಯಾಲೆಸ್ತೀನ್ ಬಂಡೂಕೋರರು ನಡೆಸಿದ ದಾಳಿಯಲ್ಲಿ ಸುಮಾರು ೩೦೦ ಮಂದಿ ಇಸ್ರೇಲಿಯನ್ನರು ಸಾವನ್ನಪ್ಪಿದ್ದಾರೆ.

ಹಮಾಸ್ ದಾಳಿ ಬಳಿಕ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ರಾತ್ರಿಯಿಡೀ ನಡೆದಿದೆ. ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ ಸುಮಾರು 20 ನಿಮಿಷಗಳಲ್ಲಿ 5000 ರಾಕೆಟ್​ಗಳನ್ನು ಹಾರಿಸಿದೆ. ಈ ದಾಳಿ ಭಾರೀ ಸಾವು-ನೋವಿಗೆ ಕಾರಣವಾಗಿದೆ.

ಈ ನಡುವೆ, ಹಮಾಸ್ ಉಗ್ರಗ್ರಾಮಿ ಸಂಘಟನೆ ನಡೆಸಿದ ದಾಳಿಗೆ ಇಸ್ರೇಲ್​ನ ಶತ್ರು ರಾಷ್ಟ್ರ ಇರಾನ್ ಸಂಭ್ರಮಿಸಿದೆ. ಇರಾನ್ ಸೇನೆ ಹಾಗೂ ಬೆಂಬಲಿಗರು ತಮ್ಮ ನಾಡಿನಲ್ಲಿ ಸಂಭ್ರಮಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

You may have missed