ಅಕ್ಟೋಬರ್ 3 ರಂದು ಮೈಸೂರು ದಸರಾ ಉದ್ಘಾಟನೆ; ಈಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು
ಮೈಸೂರು: ಮೈಸೂರು ದಸರಾ ಮಹೋತ್ಸವ-2024 ಅಕ್ಟೋಬರ್ 3 ರಂದು ಉದ್ಘಾಟನೆಯಾಗಲಿದೆ. ಅಕ್ಟೋಬರ್ 12 ರಂದು ಜಂಬೂಸವಾರಿ ನಡೆಯಲಿದ್ದು ನಾಡಹಬ್ಬದ ತಯಾರಿಗೆ ಮುನ್ನುಡಿ ಬರೆಯಲಾಗಿದೆ.
ದಸರಾ ಜಂಬೂಸವಾರಿಯಲ್ಲಿ 13 ಗಂಡು ಮತ್ತು 05 ಹೆಣ್ಣು ಆನೆಗಳು ಭಾಗಿಯಾಗಲಿದ್ದು, ಗಜಪಡೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿಯೂ ಅಭಿಮನ್ಯುವೇ ಅಂಬಾರಿ ಹೊರಲಿದ್ದು, ಸೇರಿ 14 ಆನೆಗಳು ಭಾಗಿಯಾಗಲಿವೆ. ಈ ಗಜಪಡೆಗಳು ಎರಡು ಹಂತಗಳಲ್ಲಿ ಸಾಂಸ್ಕೃತಿಕ ನಾಗರಿಗೆ ಆಗಮಿಸಲಿದ್ದು, ಮೊದಲನೇ ತಂಡದಲ್ಲಿ ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಗೋಪಿ, ಭೀಮ, ಲಕ್ಷ್ಮೀ, ಕಂಜನ್, ರೋಹಿತ್, ಏಕಲವ್ಯ ಬರಲಿವೆ. ಎರಡನೇಯ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮೀ, ಹಿರಣ್ಯ, ಮೀಸಲು, ಹರ್ಷ, ಅಯ್ಯಪ್ಪ, ಪಾರ್ಥಸಾರಥಿ, ಮಾಲದೇವಿ ಆನೆಗಳ ಆಗಮನವಾಗಲಿದೆ. ಆಗಸ್ಟ್ 21ಕ್ಕೆ ಗಜಪಯಣ ನಿಗದಿ ಆಗಿದ್ದು, ದಸರಾ ಮಹೋತ್ಸವದ ಸುಮಾರು 2 ತಿಂಗಳ ಮುಂಚಿತವಾಗಿ ಮೈಸೂರಿಗೆ ಗಜಪಡೆ ಆಗಮಿಸಲಿವೆ.