ಗರ್ಭಾವಸ್ಥೆ …ಹೆಣ್ಣಿನ ಜೀವನದ ಪ್ರಮುಖ ಘಟ್ಟ.. ಯಾಮಾರಿದ್ರೆ ಕಂಟಕ ಕಟ್ಟಿಟ್ಟ ಬುತ್ತಿ

0

ಗರ್ಭಾವಸ್ಥೆ ಪ್ರತಿಯೊಬ್ಬ ಹೆಣ್ಣಿನ ಜೀವನದ ಮಹತ್ವದ ಘಟ್ಟ. ಈ ಸಮಯದಲ್ಲಿ ಆಕೆ ತೆಗೆದುಕೊಳ್ಳುವ ಕಾಳಜಿ ಹಾಗೂ ಮುತುವರ್ಜಿಯ ಆಕೆಯ ಮಗುವನ್ನು ಆರೋಗ್ಯವಂತನಾಗಿಸುತ್ತದೆ. ಗರ್ಭದಲ್ಲಿರುವ ಮಗುವಿಗೆ ಬೇಕಾದ ಪದಾರ್ಥಗಳನ್ನು ಪೂರೈಸುವ ಜವಾಬ್ದಾರಿಗೆ ಆಕೆಗಿರುತ್ತದೆ. ಹೀಗಾಗಿ ಈ ಸಮಯದಲ್ಲಿ ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಬೇಕು.

ಕೆಲವರು ಮೂಢನಂಬಿಕೆಗೆ ಮಾರಿಹೋಗಿ ಹೆಚ್ಚು ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ, ಇದರಿಂದಾಗಿ ಮಹಿಳೆಗೆ ಹೆರಿಗೆ ಸಮಯದಲ್ಲಿ ಸಾಕಷ್ಟು ತೊಂದರೆಗಳು ಕಾಡುತ್ತದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಹಿತಮಿತ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು.
ಆರಂಭದ ಮೊದಲ ಮೂರು ತಿಂಗಳು ಗರ್ಭಿಣಿ ಮಹಿಳೆಯರಲ್ಲಿ ವಾಂತಿ ಸುಸ್ತು ಸೇರಿದಂತೆ ಕೆಲವು ಸಮಸ್ಯೆಗಳು ಕಾಡುತ್ತವೆ. ಈ ಸಮಯದಲ್ಲಿ ಒಣಹಣ್ಣುಗಳು, ದ್ರವಾಹಾರದ ವಸ್ತುಗಳನ್ನುಸೇವಿಸುವುದು ಉತ್ತಮ.

ಇನ್ನೂ ಬೇಳೆಕಾಳುಗಳು ಬೀನ್ಸ್, ಮೊಳಕೆ ಭರಿಸಿದ ಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳಲ್ಲಿ ಕಬ್ಬಿಣಾಂಶ ಮತ್ತು ಹಲವು ಜೀವಸತ್ವಗಳಿರುವ ಕಾರಣ ಅವುಗಳ ಸೇವನೆ ಉತ್ತಮ

ಇನ್ನೂ ಕಬ್ಬಿಣದ ವಸ್ತುಗಳು ಮಹಿಳೆಯರಿಗೆ ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಅತ್ಯಗತ್ಯ. ಹೀಗಾಗಿ ಅಂಜೂರ, ಒಣದ್ರಾಕ್ಷಿ, ಬಿಟ್ ರೂಟ್, ಇವುಗಳನ್ನು ಸೇವಿಸಬೇಕು. ಇದರಲ್ಲಿ ಹೇರಳವಾಗಿ ಕಬ್ಬಿಣದ ಅಂಶವಿರುತ್ತದೆ.

ಮಾಂಸಹಾರಿಗಳು ಮಾಂಸ, ಮೀನು, ಪಪ್ಪಾಯಿ, ಸೀಬೆಹಣ್ಣುಗಳನ್ನು ಹಿತಮಿತವಾಗಿ ಸೇವಿಸಬೇಕು. ಇವುಗಳ ಸೇವನೆ ಬಗ್ಗೆ ಇರುವ ಕಲ್ಪನೆ ನಿಜಕ್ಕೂ ಸುಳ್ಳು.

Leave a Reply

Your email address will not be published. Required fields are marked *

You may have missed