ಕುದರೆ ಮೇಲೂ ನಡೆಯುತ್ತದೆಯಂತೆ ಲೈಂಗಿಕ ದೌರ್ಜನ್ಯ; ಮನುಷ್ಯನ ಕ್ರೂರತೆಗೆ ಪ್ರಾಣಿಪ್ರಿಯರ ಆಕ್ರೋಶ
ಪ್ರತಿನಿತ್ಯ ನಾವು ಲೈಂಗಿಕ ದೌರ್ಜನ್ಯ, ಅತ್ಯಾಚಾರದಂಹತ ಪ್ರಕರಣಗಳನ್ನು ಕೇಳುತ್ತೇವೆ. ಇಂತಹ ದೌರ್ಜನ್ಯಕ್ಕೆ ಒಳಗಾಗುವದರಲ್ಲಿ ಮಹಿಳೆಯರು ಹಾಗೂ ಮಕ್ಕಳೇ ಹೆಚ್ಚು. ಆದರೆ ಸ್ವಿಡ್ಜರ್ ಲ್ಯಾಂಡ್ ನಲ್ಲಿ ಕುದುರೆ ಮೇಲೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತದೆಯಂತೆ..!!. ಇಲ್ಲಿ ಹೆಚ್ಚು ಮಂದಿ ಕುದುರೆಗಳನ್ನು ಖರೀದಿಸುವುದೇ ಇದೇ ಕಾರಣಕ್ಕೆಂಬ ಅಘಾತಕಾರಿ ಮಾಹಿತಿಯೊಂದು ಸಮೀಕ್ಷೆಯಿಂದ ಹೊರಬಂದಿದೆ.
ಇಲ್ಲಿ ಕನಿಷ್ಟ ಮೂರು ದಿನಕ್ಕೆ ಒಂದು ಕುದುರೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತದೆಯಂತೆ. ಸ್ವಿಡ್ಜರ್ ಲ್ಯಾಂಡ್ ಜನತೆ ಕುದುರೆ ಮೇಲೆ ಲೈಂಗಿಕ ಸಂಪರ್ಕ ಹೊಂದಲು ಅತೀವ ಆಸಕ್ತಿ ಹೊಂದಿದ್ದು, ಕಳೆದ ಒಂದೇ ವರ್ಷದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 150 ಮಂದಿಯನ್ನು ಬಂಧಿಸಲಾಗಿದೆ. ಈ ಕುರಿತಂತೆ ಅಧ್ಯಯನ ನಡೆಸಿದ ಸಂಸ್ಥೆ ಇಂತಹದೊಂದು ಅಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದು, ಅಧ್ಯಯನದ ವೇಳೆ ಸುಮಾರು 10 ಸಾವಿರ ಮಂದಿ ಕುದಿರೆಗಳ ಜೊತೆ ಲೈಂಗಿಕ ಕ್ರಿಯೆ ನಡೆಸಲು ಒಲವು ತೋರಿದ್ದಾರಂತೆ. ಇನ್ನೂ ಪ್ರಾಣಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 1,700 ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, ಈ ಅಘಾತಕಾರಿ ಸುದ್ದಿ ಪ್ರಾಣಿಪ್ರಿಯರ ಆಕ್ರೋಶಕ್ಕೂ ಕಾರಣವಾಗಿದೆ….
ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದ್ದು, ಈತಂತ್ರಜ್ಞಾನ ಲೋಕದ ವೇಗ ಎಷ್ಟು ಅಗತ್ಯವೋ ಅಷ್ಟೇ ಕೆಡುಕನ್ನು ಉಂಟು ಮಾಡುತ್ತಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ.ಇಷ್ಟಾದರೂ ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಕಾಲದ ಜೊತೆ ರಾಜಿ ಮಾಡಿಕೊಂಡು ಮುನ್ನುಗ್ಗುತ್ತಿದ್ದೇವೆ. ಆದರೆ ಈ ರಾಜಿ ಸಂದಾನ ಕೆಲವೊಮ್ಮೆ ಎಷ್ಟು ದೊಡ್ಡ ಅಪಾಯವನ್ನು ತಂದಿಕ್ಕುತ್ತದೆ ಗೊತ್ತೆ.
ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆಜೊತೆಗೆ ಭಯಾನಕರ ಕಾಯಿಲೆಗಳು ಮಾನವನನ್ನು ಕಾಡುತ್ತಿದ್ದು, ಇದರಲ್ಲಿ ಹಲವನ್ನು ನಾವೆ ಬಿಗಿದಪ್ಪಿಕೊಳ್ಳುತ್ತಿದ್ದೇವ ಎನ್ನುತ್ತಿದೆ ಸಂಶೋದನೆಗಳು. ಹೌದು ಏಷ್ಯಾದ ಹದಿಹರೆಯದವರಲ್ಲೂ ಹೆಚ್ ಐವಿ ಸೋಂಕು ವ್ಯಾಪಿಸಲು ಆರಂಭವಾಗಿದ್ದು, ಇದಕ್ಕೆ ಸ್ಮಾರ್ಟ್ ಪೋನ್ ಡೇಟಿಂಗ್ ಆಪ್ ಗಳು ಕಾರಣವಂತೆ. ವಿಶ್ವಸಂಸ್ಥೆ ಹೊರಹಾಕಿರುವ ಇಂತಹದೊಂದು ಅಘಾತಕಾರಿ ಮಾಹಿತಿ ನಿಜಕ್ಕೂ ಬೆಚ್ಚಿಬೀಳುವಂತೆ ಮಾಡಿದೆ.
ಮೊಬೈಲ್ ಡೇಟಿಂಗ್ ಆಪ್ ಗಳು ಡೇಟಿಂಗ್ ಮತ್ತು ಸೆಕ್ಸ್ ಗೆ ಮುಕ್ತ ಅವಕಾಶ ಒದಗಿಸುತ್ತಿದ್ದು, ಸಲಿಂಗಕಾಮ, ವೇಶ್ಯೆಯರ ಸಹವಾಸ, ಮಂಗಳಮುಖಿಯರೊಂದಿಗೆ ದೈಹಿಕ ಸಂಪರ್ಕ, ಅಸುರಕ್ಷಿತಸೆಕ್ಸ್, ಮಾದಕ ವಸ್ತುಗಳ, ಕಾಮೊತ್ತೆಜನಕಗಳ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಜಗತ್ತಿನ ಕೋಟಿಯತ್ಯಂತರ ಮಂದಿ ಹದಿಹರೆಯದವರಲ್ಲಿ ಹೆಚ್ ಐವಿ ಸೊಂಕು ಕಾಣಸಿಕೊಂಡಿದೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ.
ಇನ್ನೂ ಇಂತಹ ಕಳವಳಿಕಾರಿ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವಿಶ್ವಸಂಸ್ಥೆ, ಇಂತಹ ಅಪ್ ಗಳಿಗೆ ಜಾಗೃತಿ ಸಂದೇಶ ರವಾನಿಸುವ ಕುರಿತಂತೆ ಚಿಂತನೆ ನಡೆಸಿದೆ.