ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡೀರಿ ಜೋಕೆ; ಹುಡುಗೀರು ರಾಖಿ ಕಟ್ಟುತ್ತಾರಂತೆ

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದವರಿಗೆ ರಾಖಿ ಕಟ್ಟಿವ ಮೂಲಕ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯರು ವಿನೂತನ ರೀತಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿದರು.
ಯುವಭಾರತ್ ಹಾಗೂ ಕೆಎಂಪಿಕೆ ಟ್ರಸ್ಟ್ ಸಹಯೋಗದಲ್ಲಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೆಲ್ಮೆಟ್ ಧರಿಸದ ವಾಹನ ಚಾಲಕರಿಗೆ ರಾಖಿ ಕಟ್ಟಿ, ಗುಲಾಬಿ ಹೂ ನೀಡಿ, ಸಿಹಿ ವಿತರಿಸುವ ಮೂಲಕ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಮನವಿ ಮಾಡಿದರು.
ಇದೇ ವೇಳೆ ರಕ್ಷಾಬಂಧನದ ಹಿನ್ನೆಲೆಯಲ್ಲಿ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದವರಿಗೆ ಸಂಚಾರಿ ಪೊಲೀಸರು ಕೂಡ ವಿನಾಯಿತಿ ನೀಡಿದರು.ಈ ವೇಳೆ ಮಾತನಾಡಿದ ಸಂಗಟನೆಯ ಜೋಗಿಮಂಜು ಹಾಗೂ ಸಂಚಾರಿ ಪೊಲೀಸ್ ಅಧಿಕಾರಿ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ಅಭಿಯಾನ ಒಂದು ದಿನದ್ದು ಅಲ್ಲ ಇನ್ಮುಂದೆ ಯಾವಾಗಲೂ ಈ ಅಭಿಯಾನ ನಡೆಸುತ್ತಾರಂತೆ ಮೈಸೂರಿನ ವಿದ್ಯಾರ್ಥಿನಿಯರು .
