ಬಿರುಬಿಸಿಲಿನಿಂದ ಆರೋಗ್ಯ ಕಾಪಾಡಿಕೊಳ್ಳಿ…
ಇದೀಗ ಬಿರುಬಿಸಿಲು . ಹೀಗಾಗಿ ದೇಹದ ಉಷ್ಟಾಂಶ ಏರಿಕೆಯಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ. ಅದರಲ್ಲೂಬಿರುಬಿಸಿಲಿನಿಂದ ಕಂಗೆಟ್ಟಿರುವ ಜನ ತಂಪು ಪಾನೀಯಾಗಳ ಮೊರೆ ಹೋಗುತ್ತಿದ್ದರೂ ದೇಹದಲ್ಲಿನ ಉಷ್ಟಾಂಶ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೆ ಈ ಕೆಳಗಿನ ವಸ್ತುಗಳನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಬಳಸುವುದರಿಂದ ದೇಹದಲ್ಲಿನ ಉಷ್ಟಾಂಶ ನಿಯಂತ್ರಣದಲ್ಲಿ ಇಡಬಹುದು ಎನ್ನುತ್ತಾರೆ ವೈದ್ಯರು.
-
ಏಲಕ್ಕಿ- ಭಾರತೀಯ ಎಲ್ಲಾ ರೀತಿಯ ಅಡುಗೆಯಲ್ಲಿ ಉಪಯೋಗಿಸುವ ಏಲಕ್ಕಿ ದೇಹದ ಉಷ್ಟಾಂಶ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಚಹಾದ ಜೊತೆಗೂ ಇದನ್ನು ಸೇವಿಸಬಹುದು.
-
ಮಜ್ಜಿಗೆ- ಬೇಸಿಗೆ ಬಂತೆಂದರೆ ಸಾಕು ಹಳ್ಳಿಗಳಲ್ಲಿ ಈಗಲೂ ಸಹ ಮಜ್ಜಿಗೆ ಸೇವಿಸುವುದು ವಾಡಿಕೆ. ಆದರೆ ಬದಲಾದ ಜೀವನ ಶೈಲಿ ಹಾಗೂ ನಗರ ಜೀವನದಿಂದ ಮಜ್ಜಿಗೆಯನ್ನು ನಗರದ ಜನತೆ ಅಷ್ಟೊಂದು ಮಹತ್ವ ಕೊಟ್ಟಿಲ್ಲ. ಆದರೆ ಮಜ್ಜಿಗೆ ದೇಹವನ್ನು ತಂಪು ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಊಟದ ನಂತರ ಒಂದು ಗ್ಲಾಸ್ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ತುಂಬಾ ಉತ್ತಮ
-
ವಾಟರ್ ಮೆಲನ್- ಕಲ್ಲಂಗಡಿ ಹಣ್ಣು ಕೂಡ ದೇಹದ ಉಷ್ಟಾಂಶ ನಿಯಂತ್ರಕ ಎಂದೆ ಪ್ರಸಿದ್ಧಿ ಪಡೆದಿದೆ. ಈ ಹಣ್ಣಿನಲ್ಲಿ ಐರನ್, ಪೋಟಾಷಿಯಂ, ಬಿಟಾ ಕ್ಯಾರೊಟಿನ್, ಮತ್ತು ವಿಟಮಿನ್ ಸಿ ಹೇರಳವಾಗಿದೆ. ಈ ಹಣ್ಣಿನಲ್ಲಿ ಶೇಕಡಾ 95ರಷ್ಟು ನೀರಿನ ಅಂಶವೇ ಇರುವುದರಿಂದ ಇದು ಆರೋಗ್ಯ ದೃಷ್ಟಿಯಿಂದಲೂ ಭಾರಿ ಉತ್ತಮ. ಕಿಡ್ನಿ ಹಾಗೂ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ
-
ನೆಲ್ಲಿಕಾಯಿ- ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು, ಇದು ಚರ್ಮ್, ಮೂತ್ರಕೋಶ ಹಾಗೂ ದೇಹದ ಇತರ ಅಂಗಾಂಗಳ ಆರೋಗ್ಯ ವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಉಷ್ಟಾಂಶವನ್ನು ಸಮತೋಲನ ಮಾಡುತ್ತದೆ. ಹೀಗಾಗಿ ದಿನಕ್ಕೆ ಒಂದು ಬಾರಿಯಾದರೂ ಈ ಜ್ಯೂಸ್ ಸೇವಿಸಿ
-
ಕರ್ಬೂಜ- ಬೇಸಿಗೆ ಬಂತೆಂದರೆ ಸಾಕು ಎಲ್ಲೆಂದರಲ್ಲಿ ಕರ್ಬೂಜ ಹೇರಳವಾಗಿ ಸಿಗುತ್ತದೆ. ದೇಹದ ಉಷ್ಟಾಂಶವನ್ನು ಅತೀ ಶೀಘ್ರದಲ್ಲಿ ನಿಯಂತ್ರಣದಲ್ಲಿಡುವ ತಾಕತ್ತು ಈ ಹಣ್ಣಿನಲ್ಲಿ ಅಡಗಿದೆ.
-
ಕಬ್ಬು- ಹೆಚ್ಚು ಮಂದಿ ಕಬ್ಬಿಣ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ. ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ತಂಪು ಪರಿಣಾಮವನ್ನು ಇದು ಬೀರುತ್ತದೆ
-
ಬಾಳೆಹಣ್ಣು- ಪಚ್ಚೆ ಬಾಳೆ ಹಣ್ಣಿಗೆ ದೇಹದ ಉಷ್ಟಾಂಶವನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಪಚ್ಚೆ ಬಾಳೆಹಣ್ಣಿನ ಸೇವನೆ ಉತ್ತಮ
-
ನಿಂಬೆಹಣ್ಣು- ಕೆಲವರು ನಿಂಬೆಹಣ್ಣು ದೇಹದ ಉಷ್ಟಾಂಶವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ಆದರೆ ವೈದ್ಯಲೋಕದ ಪ್ರಕಾರ ದೇಹವನ್ನು ಕೂಲಾಗಿ ಇರಿಸುವಲ್ಲಿ ನಿಂಬೆಹಣ್ಣು ಮಹತ್ವದ್ದು. ಸಕ್ಕರೆ ಹಾಕಿದ ನೀರಿಗೆ ನಿಂಬೆಹಣ್ಣಿನ ರಸ ಹಿಂಡಿ ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು
-
ಸೌತೆಕಾಯಿ- ಸೌತೆಕಾಯಿಗೆ ಬೇಸಿಗೆ ಬಂತಂದೆರೆ ಎಲ್ಲಿಲ್ಲದ ಬೇಡಿಕೆ ಆರಂಭವಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಸೌತೆಕಾಯಿ ತಿನ್ನುವುದರಿಂದಲೂ ಬೇಸಿಗೆಯ ಸಮಸ್ಯೆಯಿಂದ ಪರಿಹಾರ ಕಾಣಬಹುದು.