ಕೂದಲ ಸಮಸ್ಯೆಯೇ.. ಅಂಗೈಯಲ್ಲಿದೆ ಪರಿಹಾರ…
ಸುಂದರ , ದಟ್ಟ ತಲೆಕೂದಲನ್ನು ಪಡೆದುಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸು. ಆದರೆ ಬದಲಾಗುತ್ತಿರುವ ವಾತಾವರಣ, ಹೆಚ್ಚುತ್ತಿರುವ ಮಾಲಿನ್ಯ, ಅನಾರೋಗ್ಯ ಸೇರಿದಂತೆ ಹಲವು ಕಾರಣಗಳಿಂದ ಕೂದಲು ಉದುರಿ ಸೌಂದರ್ಯವೇ ಹಾಲಾಗುತ್ತದೆ.
ಇಂತಹ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಚಿಂತೆ ಬಿಡಿ ನಿಮಗಿದೆ ಇಲ್ಲೊಂದು ಪರಿಹಾರ. ನಿಮ್ಮ ಸಮಸ್ಯೆಗೆ ಅಡುಗೆ ಮನೆಯಲ್ಲೇ ಇದೆ ಪರಿಹಾರ. ಚಿಲ್ಕರವೆ ಸೊಪ್ಪು, ಹೊನಗಣೆ ಸೊಪ್ಪು, ಮೆಂತೆ ಸೊಪ್ಪು, ಕರಿಬೇವಿನ ಸೊಪ್ಪು, ಪುದೀನ ಸೊಪ್ಪುಗಳನ್ನು ಒಂದೊಂದು ಹಿಡಿ ತೆಗೆದುಕೊಂಡು ರುಬ್ಬಿ ಬಳಿಕ ಅದಕ್ಕೆ ತೆಂಗಿನ ಎಣ್ಣೆ ಸೇರಿಸಿ ಸ್ಪಲ್ಪ ಕುದಿಸಿ. ಉಗುರು ಬೆಚ್ಚಗಾದ ಬಳಿಕ ಅದನ್ನು ಮರುದಿನ ಬಳಕೆ ಮಾಡಿ.
ಇನ್ನೂ ಹೆಚ್ಚಾಗಿ ಸೊಪ್ಪಿನ ಪದಾರ್ಥವನ್ನು ತಿನ್ನುವುದರಿಂದಲೂ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ತಲೆಹೊಟ್ಟಿನಿಂದಲೂ ಕೂದಲು ಉದುರುತ್ತದೆ. ಹೀಗಾಗಿ ಮೆಂತೆಯನ್ನು ನೀರಿನಲ್ಲಿ ನೆನೆಸಿಟ್ಟು , ಮರುದಿನ ಅದರ ಪೇಸ್ಟ್ ತಯಾರಿಸಿ ಅದನ್ನು ತಲೆಕೂದಲ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ. ಮಾತ್ರವಲ್ಲದೆ ಕೂದಲ ಕಾಂತಿ ಹೆಚ್ಚಾಗುತ್ತದೆ.
ಪುದಿನ ಸೊಪ್ಪಿನ ಸೇವನೆ ಅರೋಗ್ಯದ ದೃಷ್ಟಿಯಿಂದ ಎಷ್ಟು ಉತ್ತಮವೋ ಕೂದಲ ಆರೋಗ್ಯದಲ್ಲೂ ಇದರ ಪಾತ್ರ ಮಹತ್ವದ್ದು.