ಗಿನ್ನೀಸ್ ದಾಖಲೆ ಬರೆಯಲು ಪೋರನ ಸಾಹಸುತ್ತಾ; ಕಣ್ಣಿಗೆ ಬಟ್ಟೆಕಟ್ಟಿಕೊಂಡು ಡ್ರಮ್ ಬಾರಿಸುತ್ತಾ ಕಸರತ್ತು

ತಮಿಳುನಾಡಿನ ಕೊಯ್ಯಮತ್ತೂರಿನವನಾದ ಬಾಲಕ ಕೇವಲ 13ರ ವಯಸ್ಸಿನಲ್ಲೇ ಸಾಧನೆಗೆ ಕಸರತ್ತು ನಡೆಸಿರುವ ಈತ ಗಿನ್ನೀಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾನೆ.
ಸಾಧಿಸುವ ಮನಸ್ಸೊಂದಿದ್ದರೆ ಸಾಕು ಎಂಬುದನ್ನು ತೋರಿಸಲು ಹೊರಟಿದ್ದಾನೆ. ಬಾಲಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಡ್ರಮ್ಸ್ ಭಾರಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಕಳೆದ ಹಲವು ತಿಂಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ದಾಖಲೆ ನಿರ್ಮಿಸಲೇ ಬೇಕು ಎಂಬ ಪಣ ತೊಟ್ಟಿದ್ದಾನೆ.
ಈಗಾಗಲೇ 35 ಮತ್ತು 16ರ ವಯಸ್ಸಿನವರು ಗಿನ್ನೀಸ್ ದಾಖಲೆ ನಿರ್ಮಿಸಿದ್ದಾರೆ. ಆದರೆ ನನ್ನ ವಯಸ್ಸಿನವರು ಯಾರು ಇಲ್ಲ. ಹಾಗಾಗಿ ದಾಖಲೆ ನಿರ್ಮಿಸಲು ಪ್ರಯತ್ನ ಮಾಡುತ್ತಿದ್ದೇನೆ. ಅರ್ಧ ಗಂಟೆಯ ಕಾಲ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಡ್ರಮ್ ಬಾರಿಸಲು ತಯಾರಿ ನಡೆಸುತ್ತಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಬಾಲಕ ಹರ್ಷ ವ್ಯಕ್ತಪಡಿಸಿದ್ದಾನೆ…