‘ಸಿಎಂ ವಿರುದ್ದದ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ರೀತಿ ಸರಿಯಿಲ್ಲ’; ಮಾಜಿ ಪ್ರಾಸಿಕ್ಯೂಟರ್ ಹೇಳೋದು ಹೀಗೆ..!

ಬೆಂಗಳೂರು: ಮುಡಾ ಅಕ್ರಮ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ವಿರುದ್ದ ಟಿ.ಜೆ.ಅಬ್ರಾಹಿಂ ಎನ್ನುವ ವ್ಯಕ್ತಿ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸುತ್ತಾರೆ. ಅದರ ಪ್ರಕಾರ ಪೊಲೀಸರು ಇದರಲ್ಲಿ ಅನುಮತಿ ಪಡೆಯಬೇಕೆ ಹೊರತು ಬೇರೆಯವರು ಪಡೆಯುವಂತಿಲ್ಲ ಎಂದು ಮಾಜಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಚಂದ್ರಮೌಳಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಮೌಳಿ, ದೂರುದಾರ ಟಿ.ಜೆ.ಅಬ್ರಾಹಿಂ ಎನ್ನುವ ವ್ಯಕ್ತಿ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸುತ್ತಾರೆ. ಅದರ ಪ್ರಕಾರ ಪೊಲೀಸರು ಇದರಲ್ಲಿ ಅನುಮತಿ ಪಡೆಯಬೇಕೆ ಹೊರತು ಬೇರೆಯವರು ಪಡೆಯುವಂತಿಲ್ಲ. ಎಲ್ಲಿಯೂ ದೂರನ್ನು ದಾಖಲಿಸದೆ ಸೀದಾ ರಾಜ್ಯಪಾಲರ ಭವನದ ಕದ ತಟ್ಟುತ್ತಾರೆ. ರಾಜ್ಯಪಾಲರ ಬಳಿ ದೂರನ್ನು ದಾಖಲಿಸುವ ಮೊದಲು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕು. ಹಾಗೂ ಪೊಲೀಸರ ಬಳಿ ನನಗೆ ನ್ಯಾಯ ದೊರಕುತ್ತಿಲ್ಲ ನನ್ನ ಬಳಿ ಅಗತ್ಯ ದಾಖಲೆಗಳಿವೆ. ನಾನು ಈ ಪ್ರಕರಣವನ್ನು ಸಾಬೀತುಪಡಿಸುತ್ತೇನೆ ಎಂದಾಗ ಮಾತ್ರ ಈ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ಮುಂದಿಟ್ಟಿದ್ದಾರೆ.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪರಿಹಾರವನ್ನು ಪಡೆದು ಜೊತೆಗೆ ನಿವೇಶನಗಳನ್ನು ಪಡೆದಿದ್ದರೆ ಸ್ವಜನ ಪಕ್ಷಪಾತವಾಗುತ್ತಿತ್ತು ಹಾಗೂ ಕಾನೂನಾತ್ಮಕವಾಗಿ ತಪ್ಪು ಎಂದು ಪರಿಗಣಿಸಲ್ಪಡುತ್ತಿತ್ತು. ಮುಖ್ಯಮಂತ್ರಿಗಳ ಪತ್ನಿಯಾಗಿ ನೀವು ಈ ರೀತಿ ಮಾಡಿದ್ದು ತಪ್ಪು. ಅವರ ಕುಟುಂಬಕ್ಕೆ ನೀವು ಈ ರೀತಿ ಮಾಡಲು ಬರುತ್ತಿರಲಿಲ್ಲ ಎಂದು ಅವರನ್ನು ತಪ್ಪಿತಸ್ಥರನ್ನಾಗಿ ಮಾಡಬಹುದಿತ್ತು. ಆದರೆ ಈಗ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಎಲ್ಲಿಯೂ ಸಹ ಹಸ್ತಕ್ಷೇಪವನ್ನು ಮಾಡಿಲ್ಲ. ಹರಿಶಿಣ ಕುಂಕುಮಕ್ಕೆ ಮನೆಯಿಂದ ಬಂದಿರುವ ಉಡುಗೊರೆ ಎಂದರು.

ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟೀಸ್ ನೀಡಿದ್ದರು. ನೋಟಿಸ್ ನೀಡುವಾಗಲೇ ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ತಪ್ಪು ಮಾಡಿದ್ದರು. ಆರೋಪ ಸಾಬೀತಾಗಿದ್ದಾರೆ ಮತ್ತೆ ಉತ್ತರವನ್ನು ಏಕೆ ಕೇಳುತ್ತಾರೆ? ಕೋಳಿ ಕೇಳಿ ಮಸಾಲೆ ಅರೆದಂತೆ ಆಗಿದೆ ರಾಜ್ಯಪಾಲರ ನಡೆ ಎಂದು ಚಂದ್ರಮೌಳಿ ವಿಶ್ಲೇಷಿಸಿದ್ದಾರೆ.

You may have missed