ಬೆಳ್ಳುಳ್ಳಿಯೊಳಗಿದೆ ಆರೋಗ್ಯದ ಗುಟ್ಟು
ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿಯಲ್ಲಿ ಹಲವು ರೀತಿಯ ಆರೋಗ್ಯಕರ ಗುಣಗಳಿವೆ. ಅದರಲ್ಲೂ ಹಸಿಯಾದ ಬೆಳ್ಳುಳ್ಳಿ ಸೇವನೆಯಿಂದ, ಜೀರ್ಣಶಕ್ತಿ ವೃದ್ದಿಯ ಜೊತೆ ಜೊತೆಗೆ ಅನಗತ್ಯ ಬೊಜ್ಜಿನಿಂದ ಮುಕ್ತಿಪಡೆಯಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗೂ ಬೈಬೈ ಹೇಳಬಹುದು.
ಬೆಳಗ್ಗಿನ ಉಪಾಹರ ಸೇವನೆಗೆ 10 ನಿಮಿಷ ಮೊದಲ ಹಸಿಯಾದ ಬೆಳ್ಳುಳ್ಳಿಯ ಒಂದು ಎಸಳನ್ನು ನುಂಗುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ. ಬೆಳ್ಳುಳ್ಳಿಯಲ್ಲಿ ಸಲ್ಪರ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತೆ. ಇದು ದೇಹದಲ್ಲಿನ ಟಾಕ್ಸಿನ್ ಗಳನ್ನು(ದೇಹಕ್ಕೆ ಬೇಡವಾದ ವಿಷಕಾರಕ ಪದಾರ್ಥಗಳು)ಹೊರಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಸಿಬೆಳ್ಳುಳ್ಳಿ ದೇಹದ ರಕ್ತನಾಳದಲ್ಲಿರುವ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ಅಲ್ಲದೆ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಪ್ರಾಕೃತಿಕ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಸೆಪ್ಟಿಕ್
ಬೆಳ್ಳುಳ್ಳಿಯನ್ನು ಪ್ರಕೃತಿ ದತ್ತವಾದ ಆಂಟಿ ಆಕ್ಸಿಡೆಂಟ್ ಹಾಗೂ ಆಂಟಿ ಸೆಪ್ಟಿಕ್ ಎಂದೇ ಕರೆಯಲಾಗುತ್ತದೆ. ನಂಜಾಗವುದು, ಫಂಗಲ್ ಇನ್ ಪೆಕ್ಷನ್ ಸೇರಿದಂತೆ ಮನುಷ್ಯನ ದೇಹದಲ್ಲಿನ ರೋಗಗಳಿಗೆ ಹಸಿ ಬೆಳ್ಳುಳ್ಳಿ ವರದಾನ ಎಂದೇ ಹೇಳಬಹುದು.
ಕೊಲೆಸ್ಟ್ರಾಲ್ ನಿವಾರಕ
ಹಸಿಬೆಳ್ಳುಳ್ಳಿ ಸೇವನೆ ಕೊಲೆಸ್ಟ್ರಾಲ್ ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿಜ್ಜಾನಿಗಳು ಪತ್ತೆಹಚ್ಚಿದ್ದಾರೆ. ಹಲವು ಮಂದಿಯ ಮೇಲೆ ಪರೀಕ್ಷೆ ನಡೆಸಿ ಅಂತಿಮವಾಗಿ ಈ ಹೇಳಿಕೆಯನ್ನು ದೃಡಪಡಿಸಿದ್ದಾರೆ.
ರಕ್ತದೊತ್ತಡ ನಿವಾರಕವಾಗಿ
ಅತೀಹೆಚ್ಚಿನ ರಕ್ತದೊತ್ತಡ ನಿವಾರಕವಾಗಿಯೂ ಬೆಳ್ಳುಳ್ಳಿ ಸಹಾಯಕವಾಗಿದೆ. ಸಂಶೋಧನೆಯ ಪ್ರಕಾರ ಹಸಿಯಾದ ಬೆಳ್ಳುಳ್ಳಿ ಸೇವನೆಯಿಂದ ಹೈಪರ್ ಟೆನ್ಷನ್ ನಿಯಂತ್ರಣಕ್ಕೆ ಬರುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಪದಾರ್ಥ ದೇಹದ ಕೆಲವೊಂದು ರಸಾಯನಿಕ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದರಿಂದ ಆರೋಗ್ಯ ದೃಷ್ಟಿಯಿಂದ ಹಸಿಬೆಳ್ಳುಳ್ಳಿಸೇವನೆ ಉತ್ತಮ
ಸೊಳ್ಳೆಗಳಿಂದ ಮುಕ್ತಿ ಪಡೆಯಲು ಬೆಳ್ಳುಳ್ಳಿ…?
ತಮಾಷೆ ಎನಿಸಿದರೂ ಈ ವಿಚಾರ ಸತ್ಯ. ಹಸಿಯಾದ ಬೆಳ್ಳುಳ್ಳಿ ತಿನ್ನುವುದರಿಂದ ಬಾಯಿಯಲ್ಲಿ ಒಂದು ರೀತಿಯ ವಾಸನೆ ಹೊರಹೊಮ್ಮುತ್ತದೆ. ಇದೇ ರೀತಿ ನಮ್ಮ ಬೆವರಿನ ಮೂಲಕವೂ ಈ ಅಂಶ ಹೊರಹೋಗುತ್ತದೆ. ಹೀಗಾಗಿ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲವಂತೆ