ಗಾಂಜಾ ವಿರುದ್ದ ಖಾಕಿ ಸಮರ; ದೊಡ್ಡಬಳ್ಳಾಪುರದಲ್ಲಿ ಫೆಡ್ಲರ್ ಸೆರೆ
ಬೆಂಗಳೂರು (ಗ್ರಾ): ದೊಡ್ಡಬಳ್ಳಾಪುರ ನಗರದ ನಾಗದೇನಹಳ್ಳಿಯ ಗೀತಂ ಕಾಲೇಜ್ ಸಮೀಪದಲ್ಲಿ ಗಾಂಜಾ ಸೋಪ್ಪು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಂತರರಾಜ್ಯ ಗಾಂಜಾಫೆಡ್ಲರ್ ಒಬ್ಬನನ್ನು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹಿಂದೂಪುರ ತಾಲೂಕಿನ ಮಾನೆಪಲ್ಲಿ ಗ್ರಾಮದ ಶಿವಪ್ಪ (25 ವರ್ಷ) ಎನ್ನಲಾಗಿದ್ದು, ಈತನಿಂದ 07 ಲಕ್ಷ ರೂ ಮೌಲ್ಯದ 09ಕೆಜಿ 580 ಗ್ರಾಂ ತೂಕದ ಗಾಂಜಾ ಸೋಪ್ಪು, ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಖಚಿತ ಮಾಹಿತಿ ಆಧಾರದಲ್ಲಿ, ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‍ಪಿ ನಾಗರಾಜು ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮುನಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಪಂಕಜಾ, ಸಿಬ್ಬಂದಿಗಳಾದ ದತ್ತಾತ್ರೇಯ, ಅರ್ಜುನ್ ಲಮಾಣಿ, ವೆಂಕಟೇಶ್ ಕುಮಾರ್, ಗಂಗಯ್ಯ, ಹನುಮಂತರಾಜು, ಸಚಿನ ಉಪ್ಪಾರ ಕಾರ್ಯಾಚರಣೆ ನಡೆಸಿದ್ದಾರೆ.
ಗಾಂಜಾ ಮಾದಕ ವಸ್ತುವನ್ನು ಜನರಿಗೆ ಮಾರಾಟ ಮಾಡಿ ಸಮಾಜದಲ್ಲಿ ದುಷ್ಪರಿಣಾಮ ಉಂಟುಮಾಡುವ ಬಗ್ಗ ಸುಳಿವನ್ನಾಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.